ಫೆ.21: ಉಜಿರೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಜನಪದ ವೈಭವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 317ಡಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಅತಿಥೇಯದಲ್ಲಿ ಫೆ.21 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜನಪದ ವೈಭವ ನಡೆಯಲಿದೆ ಎಂದು ಕಾರ್ಯಕ್ರಮದ ಮುಖ್ಯ ಸಂಯೋಜಕ ಲ| ನಿತ್ಯಾನಂದ ನಾವರ ತಿಳಿಸಿದರು.
ಅವರು ಜ.19 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದರು.
ಸರ್ವಿಸ್ ಬಿಫೋರ್ ಸೆಲ್ಫ್ ಎಂಬ ಧ್ಯೇಯದೊಂದಿಗೆ ದ.ಕ ಚಿಕ್ಕಮಗಳೂರು, ಕೊಡಗು, ಹಾಸನ ಈ 4 ಕಂದಾಯ ಜಿಲ್ಲೆಗಳನ್ನು ಒಳಗೊಂಡಂತೆ ಇರುವ 100 ಲಯನ್ಸ್ ಕ್ಲಬ್‌ಗಳಿಗೆ ಜಿಲ್ಲಾ ರಾಜ್ಯಪಾಲರಾದ ಲ| ಡಾ. ಗೀತ್ ಪ್ರಕಾಶ್ ರವರ ಮಾರ್ಗದರ್ಶನದಲ್ಲಿ ವಿವಿಧ ಸಮಜಮುಖಿ ಸೇವಾ ಚಟುವಟಿಕೆಗಳು ನಡೆಯುತ್ತಿದೆ. ಅತಿಥೇಯ ಕ್ಲಬ್ಬಿನ ಸದಸ್ಯರ ತೀರ್ಮಾಣದಂತೆ ಅಂದು ಅಪರಾಹ್ನ 2.00 ರಿಂದ 6.00 ರವರೆಗೆ ಜನಪದ ವೈಭವದ ಪ್ರಯುಕ್ತ ಗೀಗೀ ಪದ, ಜನಪದ ಗೀತೆ, ತುಳು ಪಾಡ್ದನ, ಅಟಿ ಕಳೆಂಜ, ಗುಮ್ಮಟೆ, ಕೊಂಬು ಊದುವಿಕೆ, ತಾಸೆ ಬಡಿಯುವಿಕೆ, ವಾದ್ಯ ನುಡಿಸುವಿಕೆ, ತೆಂಬರೆ ಬಡಿಯುವಿಕೆ, ಪಿಲಿನಲಿಕೆ ಹೀಗೆ 10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.
ವಿಜೇತರಿಗೆ ವೈಯುಕ್ತಿಕ ನಗದು ಬಹುಮಾನ ಪ್ರಶಸ್ತಿ ಪತ್ರ ವಿತರಿಸಲಾಗುವುದು ಹಾಗೂ ಆಯ್ದ 2 ಅತ್ಯುತ್ತಮ ಆಹ್ವಾನಿತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿರುವವರು ಜ.31ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಹ ಸಂಯೋಜಕ ವಸಂತ ಶೆಟ್ಟಿ, ಲಯನ್ಸ್ ವಲಯ 1ರ ಸಲಹೆಗಾರ ಧರಣೇಂದ್ರ ಕೆ ಜೈನ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ದತ್ತಾತ್ರೇಯ ಗೊಲ್ಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.