ಬೆಳಾಲು ಶ್ರೀ ಮಾಯಾ ಮಹಾದೇವ ದೇವಸ್ಥಾನದಲ್ಲಿ ಸಂಸ್ಕಾರ ಶಿಬಿರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಇಲ್ಲಿಯ ಶ್ರೀ ಮಾಯಾ ಮಹಾದೇವ ದೇವಸ್ಥಾನದಲ್ಲಿ ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿಯ ವತಿಯಿಂದ ಸಂಸ್ಕಾರ ಶಿಬಿರ ಆರಂಭಗೊಂಡಿದ್ದು, 2ನೇ ಶಿಬಿರ ಜ.17 ರಂದು ಜರಗಿತು.
ಓಂಕಾರ, ಧ್ಯಾನ, ಯೋಗ, ಪ್ರಾಣಾಯಾಮ, ಕ್ರಿಯಾಶೀಲ ಚಟುವಟಿಕೆಗಳು, ಭಗವದ್ಗೀತೆ ಪಠಣ, ದಿನ ವಿಶೇಷತೆ ಭಜನೆ ಮೊದಲಾದ ವಿಷಯಗಳಲ್ಲಿ ಶಿಬಿರ ಜರಗಿತು. ತರಬೇತುದಾರರಾಗಿ ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಉಜಿರೆ ಪ್ರಕೃತಿ ಮಹಾವಿದ್ಯಾಲಯದ ಧರ್ಮೇಂದ್ರ ಕುಮಾರ್, ಯಕ್ಷಗಾನ ಕಲಾವಿದ ಲಕ್ಷ್ಮಣ ಗೌಡ ಪುಳಿತ್ತಡಿ, ಗಾಯಕ ಜನಾರ್ದನ ಪೂಜಾರಿ ಪಿಲತ್ತಡಿ ಉಪಸ್ಥಿತರಿದ್ದರು. ವಿಶೇಷ ಅತಿಥಿ ಉಜಿರೆ ಯೋಗ ವಿಜ್ಞಾನ ಕಾಲೇಜಿನ ಉಪನ್ಯಾಸಕ ಉದಯ ಸುಬ್ರಹ್ಮಣ್ಯರವರು ಭಾಗವಹಿಸಿದ್ದರು.
ಭಜನಾ ಮಂಡಳಿ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ಶಿವಾಶ್ರಯ ನಿಲಯದ ಬಾಲಚಂದ್ರ ಆಚಾರ್ ಮಾಯಾ ಮತ್ತು ಹರೀಶ್ ಆಚಾರ್ ಕುದ್ರಾಲು ಇವರು ಎಲ್ಲಾ ಶಿಬಿರಾರ್ಥಿಗಳಿಗೆ ತಿಂಡಿ ಮತ್ತು ಪಾನೀಯ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.