ತೋಟತ್ತಾಡಿ: ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯಿಂದ ತೋಟತ್ತಾಡಿ ಸೈಂಟ್ ಸಾವಿಯೋ ಶಾಲೆಯನ್ನು ವಿಮಾ ಶಾಲೆ ಘೋಷಣೆ ಹಾಗೂ ಕೊಡುಗೆ ಉದ್ಘಾಟನಾ ಸಮಾರಂಭವು ಜ.18 ರಂದು ಶಾಲೆಯಲ್ಲಿ ಜರುಗಿತು.
ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ದೇವಪ್ಪ ನಾಯ್ಕ ವಿಮಾ ಶಾಲೆ ಕೊಡುಗೆಯನ್ನು ಉದ್ಘಾಟಿಸಿ ಮಾತನಾಡಿ, ಎಲ್ಐಸಿ ಯು ಜನರಿದ್ದ ಸಂಸ್ಥೆ. ಸಣ್ಣ ಉಳಿತಾಯದಿಂದ ಮಕ್ಕಳ ಪಾಲಿಸಿಗಳ ಮೂಲಕ ಭವಿಷ್ಯ ಉಜ್ವಲಗೊಳಿಸುವಂತೆ ಕರೆ ನೀಡಿದರು.
ಬೆಳ್ತಂಗಡಿ ಶಾಖೆಯ ಅಭಿವೃಧ್ಧಿ ಅಧಿಕಾರಿ ಉದಯ ಶಂಕರ ಕೆ, ಗ್ರಾಮೀಣ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರನ್ನು ಅಭಿನಂದಿಸಿದರು. ಪ್ರಸ್ತುತ ವರ್ಷವೂ ಶಾಲೆಯನ್ನು ವಿಮಾ ಶಾಲೆ ಮಾಡುವರೇ ಪೋಷಕರ ಬೆಂಬಲ ಅಗತ್ಯ ಎಂದರು. ಶ್ರಮಿಸಿದ ವಿಮಾ ಪ್ರತಿನಿಧಿ ನೀಲಯ್ಯ ಉಪಸ್ಥಿತರಿದ್ದರು.
ಶಾಲಾ ಪರವಾಗಿ ಮುಖ್ಯೋಪಾಧ್ಯಾಯಿನಿ ಡಾ| ಸಿ. ಡೈಸಿ ಥಾಮಸ್ ಕೊಡುಗೆ ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಿದರು. ಶಿಕ್ಷಕಿ ಸಿ| ಅರ್ನಿಕಾ, ಸಿ| ಶೈನಿ, ಶಿಕ್ಷಕ ಸುರೇಶ್, ವಸಂತ ಹಾಗೂ ಪೋಷಕರು ಉಪಸ್ಥಿತರಿದ್ದರು