ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಆಡಳಿತ ಮಂಡಳಿ ಮಾಸಿಕ ಸಭೆ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ ವಸಂತ ಬಂಗೇರ, ಉಪಾಧ್ಯಕ್ಷ ಮನೋಹರ ಇಳಂತಿಲ, ಕೋಶಾಧಿಕಾರಿ ಎಪಿಎಂಸಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ಜೊತೆಕಾರ್ಯದರ್ಶಿ ಚಂದ್ರಹಾಸ, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜಶ್ರೀ ರಮಣ್, ಮಾಜಿ ಅಧ್ಯಕ್ಷರುಗಳಾದ ಭಗೀರಥ ಜಿ, ಕೆ. ಎಸ್ ಯೋಗೀಶ ಕುಮಾರ್, ನಿರ್ದೇಶಕರುಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯತ್ವ ಅಭಿಮಾನದ ಬಗ್ಗೆ ಚರ್ಚಿಸಲಾಯಿತು. ಕನಿಷ್ಟ ರೂ. ೨೫೦/- ರ ಅಜೀವ ಸದಸ್ಯತನ ತಾಲೂಕಿನ ಪ್ರತಿ ಗ್ರಾಮಗಳ ಮನೆಯೊಂದರ ಸದಸ್ಯರನ್ನಾಗಿ ಮಾಡಿಕೊಳ್ಳುವುದು. ಸಂಘದ ವತಿಯಿಂದ ನೀಡುವ ವಿದ್ಯಾರ್ಥಿ ವೇತನ ಮತ್ತು ಯಾವುದೇ ಸಹಾಯಧನ ಪಡೆಯುವರೇ ಫಲಾನುಭವಿಗಳು ಸಂಘದ ಸದಸ್ಯರಾಗಿರುವುದು ಕಡ್ಡಾಯ ಎಂದು ನಿರ್ಣಯಿಸಲಾಯಿತು.
ಗ್ರಾಮ ಮಟ್ಟದಲ್ಲಿ ಸಂಘವನ್ನು ಬಲಪಡಿಸುವ ಉದ್ದೇಶದಿಂದ ಎಲ್ಲಾ ನಿರ್ದೇಶಕರುಗಳು, ಗ್ರಾಮ ಸಮಿತಿಗಳ ಪದಾಧಿಕಾರಿಗಳು ಸಹಕರಿಸುವಂತೆ ನಿರ್ಣಯಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.