ತಣ್ಣೀರುಪಂತ: ಇಲ್ಲಿಯ ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿದ್ದ ನಾರಾಯಣ ಭಟ್ ರವರ ನಿಧನದಿಂದ ತೆರವಾದ ಉರುವಾಲು ಗ್ರಾಮದ ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ರೋಹಿತ್ ಶೆಟ್ಟಿ ಪಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುಕನ್ಯಾ ತಿಳಿಸಿದ್ದಾರೆ.
ಜ.೨೪ ರಂದು ನಡೆಯಬೇಕಾಗಿದ್ದ ತಣ್ಣೀರುಪಂತ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ತೆರವಾದ ನಿರ್ದೇಶಕರ ಸ್ಥಾನಕ್ಕೆ ಉರುವಾಲು ಗ್ರಾಮದ ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಸಹಕಾರ ಭಾರತಿ ಅಭ್ಯರ್ಥಿಗಳಾದ ರೋಹಿತ್ ಶೆಟ್ಟಿ, ಯೋಗೀಶ್ ಭಟ್ ನೂಜಿಲೆ, ಸುರೇಶ್ ಹೆಚ್.ಎಲ್ ಹಲೇಜಿ ನಾಮಪತ್ರ ಸಲ್ಲಿಸಿದ್ದರು.
ಇವರಲ್ಲಿ ಯೋಗೀಶ ಭಟ್ ಮತ್ತು ಸುರೇಶ್ ಹೆಚ್.ಎಲ್ ರವರು ನಾಮಪತ್ರ ಹಿಂದಕ್ಕೆ ಪಡೆದಿದ್ದು, ರೋಹಿತ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.