ಕಳಿಯ ಗ್ರಾಮದ ಪಾಳ್ಯದಲ್ಲಿ ಸಿಡಿಲು ಬಡಿದು ಗೋಡೆ ಬಿರುಕು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ : ಇಲ್ಲಿಯ ಕಳಿಯ ಗ್ರಾಮದ ಪಾಳ್ಯ ನಿವಾಸಿ ಸುಂದರ ಪೂಜಾರಿಯವರ ಮನೆಗೆ ಜ.16 ರಾತ್ರಿ ಸಿಡಿಲು ಬಡಿದು ಮನೆಯ ವಿದ್ಯುಚ್ಛಕ್ತಿ ಉಪಕರಣಗಳ ವಯರ್ ಗಳು ಸುಟ್ಟು ಭಾಗಶಃ ಹಾನಿಯಾಗಿದೆ.ರಾತ್ರಿ ವೇಳೆಗೆ ಭಾರೀ ಮಳೆ ಮತ್ತು ಭಾರೀ ದೊಡ್ಡ ಶಬ್ದದ ಸಿಡಿಲು ಬಡಿತಕ್ಕೆ ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ.

ಮನೆಯ ಹಿಂಭಾಗ ಗೋಡೆಗೆ ಸಿಡಿಲು ಬಡಿದು ಗೋಡೆಯ ಸಾರಣೆ ಎದ್ದ ಪುಡಿಯಾಗಿರುವ ಘಟನೆ ನಡೆದಿದೆ. ಮನೆಯ ಯಜಮಾನ ಕೂಲಿ ಕಾರ್ಮಿಕರಾಗಿದ್ದು ಕಷ್ಟಪಟ್ಟು ಕಳೆದ ಎರಡು ವರ್ಷಗಳ ಹಿಂದೆ ಸಣ್ಣ ಮನೆಯೊಂದನ್ನು ನಿರ್ಮಾಣ ಮಾಡಿದರು. ಈ ಘಟನೆಯಿಂದ ಮನೆಯವರಿಗೆ ಅಘಾತವಾಗಿದೆ. ಕಳಿಯ ಪಂ. ಸದಸ್ಯರಾದ ಹರೀಶ್ ಕುಮಾರ್ ಬಿ. ಮರಿಟಾ ಪಿಂಟೋ, ಸ್ಥಳೀಯರಾದ ಶ್ರೀನಿವಾಸ ಬೆರ್ಕೆತೋಡಿ ಹಾಗೂ ಕಳಿಯ ಪಂಚಾಯತ್ ಸ್ಥಳೀಯ ಗ್ರಾಮ ಕರಣೀಕರಾದ ರವಿ ಎಮ್.ಎನ್, ಸ್ಥಳಕ್ಕೆ ಭೇಟಿ ನೀಡಿ ಮನೆಯನ್ನು ಪರಿಶೀಲಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.