ತೆಂಕಕಾರಂದೂರು: ಇಲ್ಲಿಯ ತೆಂಕಕಾರಂದೂರು ಸಂತ ರಫಾಯಿಲ್ ಹಿ.ಪ್ರಾ ಶಾಲೆಗೆ ಶಾಲಾ ಶಿಕ್ಷಕ ರಕ್ಷಕ ಸಮಿತಿ ವತಿಯಿಂದ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವ ವಿದ್ಯಾರ್ಥಿಗಳ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಅನುಕೂಲವಾಗಲು ಥರ್ಮಲ್ ಸ್ಕ್ರೀನಿಂಗ್ ಉಪಕರಣವನ್ನು ಜ.18 ರಂದು ಕೊಡುಗೆಯಾಗಿ ನೀಡಲಾಯಿತು.
ಶಾಲಾ ಶಿಕ್ಷಕ ರಕ್ಷಕ ಸಮಿತಿಯ ಉಪಾಧ್ಯಕ್ಷ ಉಮೇಶ್ ಪೂಜಾರಿ ಯವರು ಶಾಲಾ ಸಂಚಾಲಕ ಫಾ.ಮೆಲ್ವಿನ್ ಡಿ’ಸೋಜಾ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಮಿತಿಯ ಸರ್ವ ಸದಸ್ಯರು, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.