ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸೇವಾ ಟ್ರಸ್ಟ್, ಸುವರ್ಣ ಮಹೋತ್ಸವ ಸಮಿತಿ ಇದರ ಜಂಟಿ ಸಹಯೋಗದಲ್ಲಿ ಕಿಲ್ಲೂರಿನ ಕೃಷಿಕ ಡೊಂಬಯ್ಯ ನಾಯ್ಕ ರವರಿಗೆ ರೂ.3.5ಲಕ್ಷ ಮೌಲ್ಯದ ಟ್ರಾಕ್ಟರ್ ಹಸ್ತಾಂತರಿಸಲಾಯಿತು
ರೋಟರಿ ಜಿಲ್ಲೆ 3181 ವಲಯ 4ರ ಗವರ್ನರ್ ಎಂ.ರಂಗನಾಥ ಭಟ್ ರವರು ಕೀಲಿಕೈ ಕೊಡುವ ಮೂಲಕ ಟ್ರಾಕ್ಟರ್ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಹಾಗೂ ವಿಧಾನ ಪರಿಷತ್ಶಾಸಕ ಕೆ. ಪ್ರತಾಪ ಸಿಂಹ ನಾಯಕ್, ಇನ್ನೋರ್ವ ಅಸಿಸ್ಟೆಂಟ್ ಗವರ್ನರ್ ಡಾ. ಯತಿ ಕುಮಾರಸ್ವಾಮಿ ಗೌಡ , ರೋಟರಿ ಕ್ಲಬ್ ಅಧ್ಯಕ್ಷ .ಬಿ.ಕೆ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ, ರೋಟರಿ ಕ್ಲಬ್ ಪೂರ್ವಾಧ್ಯಕ್ಷರುಗಳಾದ ಶ್ರೀಕಾಂತ ಕಾಮತ್, .ಡಿ.ಎಂ.ಗೌಡ, ಡಾ. ಶಶಿಧರ ಡೋಂಗ್ರೆ ಹಾಗೂ ಸದಸ್ಯ ಬಾಬು ಪೂಜಾರಿ ಉಪಸ್ಥಿತರಿದ್ದರು.