ಮಡಂತ್ಯಾರು: ಕಳೆದ 47 ವರ್ಷಗಳಿಂದ ಮಡಂತ್ಯಾರು ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ನವಜ್ಯೋತಿ ಗೋಲ್ಡ್ ಇದರ 7ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ,41 ವರ್ಷಗಳಿಂದ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ದಕ್ಷ ಹಾಗೂ ಪ್ರಾಮಾಣಿಕವಾಗಿ ನಿಭಾಯಿಸಿ, ಪ್ರಸ್ತುತ ಲೆಕ್ಕಿಗರಾಗಿ ಕಾರ್ಯನಿರ್ವಹಿಸಿ, ಈ ಜನವರಿ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿರುವ ಎಂ. ಮುತ್ತಪ್ಪ ಮೂಲ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಮಡಂತ್ಯಾರಿನ ನವಜ್ಯೋತಿ ಗೋಲ್ಡ್ ಮಳಿಗೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನವಜ್ಯೋತಿ ಗೋಲ್ಡ್ ಸಂಸ್ಥೆಯ ಮುಖ್ಯ ಪ್ರವರ್ತಕ ಕೆ. ಎ. ದಾಮೋದರ ಆಚಾರ್ಯ ದಂಪತಿ ಮತ್ತು ಮನೆಯವರು, ಮಡಂತ್ಯಾರು ಗ್ರಾ.ಪಂ ಸದಸ್ಯ ವಿಶ್ವನಾಥ ಪೂಜಾರಿ, ಕುಮಾರ ನಾಯ್ಕ, ಮೊದಲಾದವರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.