ಉಜಿರೆ: ಬೆಳ್ತಂಗಡಿ ತಾಲೂಕು ಬಂಟರ ಸಂಘದ ಉಜಿರೆ ವಲಯ ಸಮಿತಿ ಹಾಗು ಉಜಿರೆ ,ಮುಂಡಾಜೆ,ತೋಟತ್ತಾಡಿ ಗ್ರಾಮ ಸಮಿತಿ ಪದಾಧಿಕಾರಿಗಳ ಜಂಟಿ ಸಭೆಯು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉಜಿರೆ ವಲಯಾಧ್ಯಕ್ಷ ವೆಂಕಟ್ರಮಣ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉಜಿರೆ ವಲಯ ವ್ಯಾಪ್ತಿಯ ಉಜಿರೆ ಹಾಗು ಮುಂಡಾಜೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ಬಂಟ ಸಮಾಜದ ಪುಷ್ಪಾವತಿ ಆರ್ .ಶೆಟ್ಟಿ , ಜಗನ್ನಾಥ ರೈ , ಮುಂಡಾಜೆ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದ ಅಗರಿ ರಾಮಣ್ಣ ಶೆಟ್ಟಿ , ಮುಂಡ್ರುಪ್ಪಾಡಿ ವಿಶ್ವನಾಥ ಶೆಟ್ಟಿ ಹಾಗೂ ಸುಮಾ ಶೆಟ್ಟಿ ಇವರುಗಳಿಗೆ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು .
ಸನ್ಮಾನಿತರು ಸನ್ಮಾನ ಸ್ವೀಕರಿಸಿ ಮಾತನಾಡಿ ತಮ್ಮ ಗೆಲುವಿಗೆ ಶಾಸಕ ಹರೀಶ್ ಪೂಂಜ ಅವರ ಅಭಿವೃದ್ಧಿ ಕಾಮಗಾರಿಗಳೇ ಕಾರಣವಾಗಿದೆ ಎಂದು ನುಡಿದು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಹಿರಿಯರಾದ ಚಂದ್ರಮೋಹನ್ ರೈ ನೂತನ ಸದಸ್ಯರಿಗೆ ಹಿತವಚನ ನೀಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ವಲಯ ಪದಾಧಿಕಾರಿಗಳು,ಉಜಿರೆ,ಮುಂಡಾಜೆ,ತೋಟತ್ತಾಡಿ ಗ್ರಾಮ ಸಮಿತಿಯ ಅಧ್ಯಕ್ಷರುಗಳು ಹಾಗೂ ವಲಯ ಸಂಚಾಲಕಿ ಪುಷ್ಪಾವತಿ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ನಿರಂಜನ ಶೆಟ್ಟಿ ವರದಿ ವಾಚಿಸಿ, ಕೋಶಾಧಿಕಾರಿ ಮೋಹನ್ ಶೆಟ್ಟಿ ಆಯ-ವ್ಯಯ ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿ ಅನುಮೋದಿಸಲಾಯಿತು
ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿ, ವಲಯ ಉಪಾಧ್ಯಕ್ಷ ಕೆಂಬರ್ಜೆ ಜಯರಾಮ ಶೆಟ್ಟಿ ವಂದಿಸಿದರು.