ಕಣಿಯೂರು-ಕೊಯ್ಯೂರು ಗ್ರಾಮಗಳ ಸಂಪರ್ಕ 10.ಕೋಟಿ ವೆಚ್ಚದ ಕಿಂಡಿ ಅಣ್ಣೆಕಟ್ಟು ನಿರ್ಮಾಣ ಅನುದಾನ ನೀಡಿದ ಸಚಿವ ಮಾಧುಸ್ವಾಮಿಯವರಿಗೆ ಗ್ರಾಮಸ್ಥರಿಂದ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಣಿಯೂರು ಹಾಗೂ ಕೊಯ್ಯೂರು ಗ್ರಾಮಗಳ ಸಂಪರ್ಕ ಹಾಗೂ ಗ್ರಾಮದ ಸುತ್ತಮುತ್ತ ಸುಮಾರು 20 ಕೀ.ಮೀ. ಸುತ್ತಳತ್ತೆಯ ಕೃಷಿ ಭೂಮಿಗೆ ಪ್ರಯೋಜನವಾಗುವಂತೆ ಅಂತರ್ಜಲ ವೃದ್ಧಿಸಲು ಪರಡಾಲು ಎಂಬಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಕಿಂಡಿ ಅಣ್ಣೆಕಟ್ಟು ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಿದ ಕರ್ನಾಟಕ ಸರಕಾರದ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವ  ಜೆ.ಸಿ ಮಾಧು ಸ್ವಾಮಿಯವರನ್ನು  ಕಣಿಯೂರು ಗ್ರಾಮದ ಸಮಸ್ತ ನಾಗರಿಕರ ಪರವಾಗಿ ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ಜ.16 ರಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಹರೀಶ್‌ ಪೂಂಜ, ವಿಧಾನಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ  ಶ್ರೀನಿವಾಸ ರಾವ್, ಜಿಲ್ಲಾ ಎಸ್.ಟಿ ಮೋರ್ಚಾದ ಅಧ್ಯಕ್ಷ ಚೆನ್ನಕೇಶವ, ಜಿಲ್ಲಾ ಪಂಚಾಯತ್ ಸದಸ್ಯರಾದ ಕೊರಗಪ್ಪ ನಾಯ್ಕ, ತಾ. ಪಂ. ಸದಸ್ಯೆ ಧನಲಕ್ಷ್ಮೀ ಜನಾರ್ಧನ, ಕಣಿಯೂರು ಗ್ರಾ.ಪಂ. ಮಾಜಿ ಅಧ್ಯಕ್ಷ  ಸುನೀಲ್, ಪದ್ಮುಂಜ ಸೊಸೈಟಿ  ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷ  ಅಶೋಕ್ ಮತ್ತು ಸೊಸೈಟಿಯ ಎಲ್ಲಾ ನಿರ್ದೇಶಕರು, ಹಾಲು  ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳು, ತಾ.ಪಂ ಸದಸ್ಯರಾದ ಅಮಿತಾ ಕುಶಾಲಪ್ಪ ಗೌಡ, ಕೃಷ್ಣಯ್ಯ ಆಚಾರ್ಯ, ಎ.ಪಿ.ಎಮ್‌ಸಿ ಸದಸ್ಯ ಹಾಗೂ ಮಹಾಶಕ್ತಿ ಮಂಡಲದ ಅಧ್ಯಕ್ಷ  ಜಯಾನಂದ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಮುಗೇರಡ್ಕ, ದ.ಕ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಯತೀಶ್ ಶೆಟ್ಟಿ, ಕಣಿಯೂರು ಗ್ರಾ.ಪಂ ಪಂಚಾಯತ್ ಸದಸ್ಯರಾದ, ಪ್ರವೀಣ್ ಗೌಡ, ಕೃಷ್ಣ ನಿರಾಡಿ, ಯಶೋಧರ ಶೆಟ್ಟಿ, ಬಿಜೆಪಿ ಮುಖಂಡರಾದ ಶಂಭು ರೈ, ಭುಜಂಗ ರೈ, ರಾಜೀವ ರೈ, ಶಾರದ ಆರ್.ರೈ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.