ಉಜಿರೆ: ಉಡುಪಿಯ ಎಂ. ಜಿ. ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಅರವಿಂದ ಹೆಬ್ಬಾರ್ ಸಂಪಾದಕತ್ವದಲ್ಲಿ ಪ್ರಕಟಿಸಿದ “ಈಶ್ವರಾರ್ಪಣ” ಗ್ರಂಥವನ್ನು ಜ.17 ರಂದು ಧರ್ಮಸ್ಥಳದಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈಶ್ವರಯ್ಯ ಅವರ ವಿಮರ್ಶಾ ಲೇಖನಗಳ ಸಂಗ್ರಹವಾದ “ಈಶ್ವರಾರ್ಪಣ” ಪುಸ್ತಕದ ಸಂಪಾದಕ ಪ್ರೊ. ಅರವಿಂದ ಹೆಬ್ಬಾರ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು. ಧರ್ಮಸ್ಥಳದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಕೆಮರಾಗಳ ವ್ಯವಸ್ಥಿತ ಜೋಡಣೆ ಬಗ್ಗೆ ಈಶ್ವರಯ್ಯ ನೀಡಿದ ಸಹಕಾರವನ್ನು ಹೆಗ್ಗಡೆಯವರು ಸ್ಮರಿಸಿದ್ದಾರೆ.