ಸಂಘಟನೆಗೆ ಸುಲಭ ದಾರಿ ಕ್ರೀಡಾ ಕೂಟ: ಸತ್ಯಜಿತ್ ಸುರತ್ಕಲ್
ಬೆಳಾಲು: ಯಾವುದೇ ಸಂಘಟನೆ ಮಾಡಲು ಸುಲಭ ದಾರಿ ಕ್ರೀಡಾಕೂಟ ಆಯೋಜನೆಯಿಂದ ಸಾಧ್ಯ. ಕ್ರೀಡೆಯ ಮೂಲಕ ಯುವ ಸಂಘಟನೆಯನ್ನು ಮಾಡಿ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ ಎಂದು ಶ್ರೀ ನಾರಾಯಣಗುರು ಧರ್ಮ ಪಾಲನಾ ರಾಜ್ಯ ಗೌರವ ಸಲಹೆಗಾರ ಸತ್ಯಜಿತ್ ಸುರತ್ಕಲ್ ಹೇಳಿದರು.
ಅವರು ಜ.17 ರಂದು ಬೆಳಾಲು ಶ್ರೀ ಧ.ಮಂ ಪ್ರೌಢಶಾಲಾ ಮೈದಾನದಲ್ಲಿ ಕೆಸಿಎಲ್ ಸೀಸನ್-2 2021ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಗಿ ಭಾಗವಹಿಸಿ ಮಾತನಾಡಿದರು.
ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ವಿದ್ಯೆ ಅಗತ್ಯವಿದ್ದು, ಸಂಘಟನೆಯ ಮೂಲಕ ವಿದ್ಯೆಗೆ ಪ್ರೋತ್ಸಾಹ ನೀಡಬೇಕು. ಇದರಿಂದ ಉದ್ಯೋಗ ಜಾಗೃತಿ ಮಾಡಲು ಸಾಧ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಕೋಟಿ ಚೆನ್ನಯರ ಆದರ್ಶದಂತೆ ಜೀವನ ಸಾಗಿಸಲು ಸಾಧ್ಯ ಎಂದರು.
ಬೆಳಾಲು ಕೋಟಿ ಚೆನ್ನಯ ಕ್ರಿಕೇಟರ್ಸ್ನ ಅಧ್ಯಕ್ಷ ಗಣೇಶ್ ಕುಕ್ಕೊಟ್ಟು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಂತೆಕಟೆ ಮಲ್ಲಿ ಫಾರ್ಮಸಿನ ಸಚಿನ್ ನೂಜೋಡಿ, ಬೆಳಾಲು ಗ್ರಾ.ಪಂ ಮಾಜಿ ಅಧ್ಯಕ್ಷ ದಿನೇಶ್ ಕೊಟ್ಯಾನ್, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಜಾರಪ್ಪ ಪೂಜಾರಿ ಬೆಳಾಲು, ಉಮಾನಾಥ ಕೋಟ್ಯಾನ್ ಒಡಿಪ್ರೊಟ್ಟು, ಪ್ರಕಾಶ ಪೂಜಾರಿ ನಾರಾವಿ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ತಾಲೂಕು ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷ ಸಂತೋಷ್ ಉಪ್ಪಾರು ಸ್ವಾಗತಿಸಿದರು, ಉಪನ್ಯಾಸಕ ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿ, ಗ್ರಾ.ಪಂ ಮಾಜಿ ಸದಸ್ಯ ದಯಾನಂದ ಪಿ ಬೆಳಾಲು ವಂದಿಸಿದರು. ತೀರ್ಪುಗಾರರಾಗಿ ಹರೀಶ್ ಪಡೀಲ್, ಮಹೇಶ್, ವೀಕ್ಷಕ ವಿವರಣೆಯನ್ನು ಸುಕುಮಾರ್ ನಡೆಸಿಕೊಟ್ಟರು.
ಬಹುಮಾನಗಳ ವಿಜೇತರು
ಸನ್ಮಾನ
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರಾದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಕ್ರೀಡಾ ಸಾಧಕ ಶಶಿಧರ ಒಡಿಪ್ರೊಟ್ಟು, ಸುಕೇಶ್ ಎರ್ಮಳರವರ ಪರವಾಗಿ ತಾಯಿ ರೇಖಾ, ಸಾಮಾಜಿಕ ಸೇವೆಗಾಗಿ ವೀರಮ್ಮ ಸಂಜೀವ ಸಾಲ್ಯಾನ್ ಡೊಂಕಬೆಟ್ಟು ಇವರುಗಳನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖ ಸನ್ಮಾನಿಸಿ ಗೌರವಿಸಲಾಯಿತು.
ಬಹುಮಾನಗಳ ವಿಜೇತರು
ಗಣೇಶ್ ಕುಕ್ಕೊಟ್ಟು ಮಾಲಕತ್ವದ ಕೋಟಿ ಚೆನ್ನಯ ಕ್ರಿಕೆಟರ್ಸ್ ಬೆಳಾಲು ಪ್ರಥಮ,
ರಕ್ಷಿತ್ ಮತ್ತು ರಾಜೇಶ್ ಮಾಲಕತ್ವದ ಆದರ್ಶ ನಾಲ್ಕೂರು ದ್ವಿತೀಯ,
ಮನೋಜ್ ಕಾಶಿಪಟ್ಣ ಮಾಲಕತ್ವದ ಮಹೇಶ್ ಫ್ರೆಂಡ್ಸ್ ಕಾಶಿಪಟ್ಣ ತೃತೀಯ
ದೇವಿಪ್ರಸಾದ್ ಬರೆಮೇಲು ಮಾಲಕತ್ವದ ಪ್ರಸಾದ್ ಅಲ್ಯೂಮೀನಿಯಂ ಕನ್ಯಾಡಿ-II ಚರ್ತುರ್ಥ
ಶಿಸ್ತು ಪಾಲನಾ ತಂಡವಾಗಿ ಮಹೇಶ್ ಫ್ರೆಂಡ್ಸ್ ಕಾಶಿಪಟ್ಣ, ಉತ್ತಮ ಎಸೆತಗಾರರಾಗಿ ರೂಪೇಶ್ ನಾಲ್ಕೂರು, ಉತ್ತಮ ಬ್ಯಾಟಿಂಗ್ಗಾಗಿ ಅಶ್ವಿನಿ ನಾಲ್ಕೂರು, ಶ್ರೇಷ್ಠ ಆಟಗಾರರಾಗಿ ನಿಖಿಲ್ ಬಹುಮಾನವನ್ನು ಪಡೆದರು.