ಪಜಿರಡ್ಕ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಸುಮಾರು ರೂ 4.50ಕೋಟಿ ವೆಚ್ಚದಲ್ಲಿ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ ಇಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟನ್ನು ಸಚಿವ ಜೆ.ಸಿ ಮಾಧುಸ್ವಾಮಿ ರವರು ಜ.16 ರಂದು ಉದ್ಘಾಟಿಸಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸರಕಾರದ ಕಾರ್ಯದರ್ಶಿ ಸಿ ಮೃತುಂಜಯ ಸ್ವಾಮಿ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ತಾ.ಪಂ ಸದಸ್ಯ ಶಶಿಧರ ಕಲ್ಮಂಜ, ಗ್ರಾ.ಪಂ. ಕೃಷ್ಣಮೂರ್ತಿ ಹೆಬ್ಬಾರ್, ವರದಾಕ್ಷ ಆಚಾರ್ಯ, ಪ್ರವೀಣ್ ಗೌಡ, ಪಂಚಾಯತ್ ಪಿಡಿಒ ಇಂತಿಯಾಜ್, ವಿಷ್ಣು ಪಟವರ್ಧನ್, ರವಿಕುಮಾರ್ ಪಜಿರಡ್ಕ, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ದಿನೇಶ್ ಗೌಡ, ಶ್ರೀನಿವಾಸ ಕಲ್ಮಂಜ, ಗುತ್ತಿಗೆದಾರ ಸುನಿತ್ ಹೆಗ್ಡೆ, ಬಿಜೆಪಿ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.