ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಇಂದಿರಾ ನಗರ ಬೆಂಗಳೂರು, ರೋಟರಿ ಸೇವಾ ಟ್ರಸ್ಟ್, ಬೆಳ್ತಂಗಡಿ, ಸುವರ್ಣ ಮಹೋತ್ಸವ ಸಮಿತಿ ಇವರ ಜಂಟಿ ಸಹಯೋಗದಲ್ಲಿ ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಎರಡು ಕೊಠಡಿಗಳನ್ನು ಸುಮಾರು 3 ಲಕ್ಷ ರೂ ಗಳ ವೆಚ್ಚದಲ್ಲಿ ನವೀಕರಿಸಿ ಜ. 15 ಹಸ್ತಾಂತರಿಸಲಾಯಿತು.
ರೋಟರಿ ಜಿಲ್ಲೆ 3181 ವಲಯ 4 ರ ಗವರ್ನರ್ ರೊ.ಎಂ ರಂಗನಾಥ ಭಟ್ ಅವರು ದೀಪ ಬೆಳಗುವ ಮೂಲಕ ಕಟ್ಟಡವನ್ನು ಉದ್ಗಾಟಿಸಿದರು.
ಈ ಸಂಧರ್ಭದಲ್ಲಿ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ರೊ. ಪ್ರತಾಪಸಿಂಹ ನಾಯಕ್, ಹಾಗೂ ಇನ್ನೋರ್ವ ಅಸಿಸ್ಟೆಂಟ್ ಗವರ್ನರ್ ರೊ.ಡಾ.ಯತಿಕುಮಾರ ಸ್ವಾಮಿ ಗೌಡ , ರೋಟರಿ ಕ್ಲಬ್ ಬೆಳ್ತಂಗಡಿ ಯ ಅಧ್ಯಕ್ಷರಾದ ರೊ ಬಿ.ಕೆ.ಧನಂಜಯ ರಾವ್ ರೊ.ಬೆಂಗಳೂರು ಇಂದಿರಾ ನಗರ ದ ಪೂರ್ವಾಧ್ಯಕ್ಷರೂ ಕಟ್ಟಡಗಳ ನವೀಕರಣದ ರುವಾರಿ ರೊ.ಜಗದೀಶ್ ಮುಗುಳಿ ರೋಟರಿ ಕ್ಲಬ್ ಬೆಳ್ತಂಗಡಿ ಯ ಕಾರ್ಯದರ್ಶಿ ರೊ.ಶ್ರೀಧರ ಕೆ.ವಿ. ರೋಟರಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರೊ.ಎಂ.ವಿ ಭಟ್ , ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ರೊ.ಡಾ.ಶಶಿಧರ ಡೋಂಗ್ರೆ, ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ್ ,ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾದ ಶ್ರೀ ಜಯಾನಂದ ಗೌಡ ಹಾಗೂ ರೋಟರಿ ಟೀಚ್ ನ ಚೇರ್ ಮಾನ್ ರೊ.ಡಿ.ಯಂ.ಗೌಡ, ಬೆಳ್ತಂಗಡಿ ನಗರ ಪಂಚಾಯತ್ ನ ಮಾಜೀ ಅಧ್ಯಕ್ಷರಾದ ನಾರಾಯಣ ರಾವ್ ಮುಗುಳಿ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಇದೇ ಸಂಧರ್ಭದಲ್ಲಿ ಕಟ್ಟಡ ನವೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ರೊ.ಜಗದೀಶ್ ಮುಗುಳಿ ಅವರನ್ನು ಸನ್ಮಾನಿಸಲಾಯಿತು ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ರೋಟರಿ ಬೆಂಗಳೂರು ಇಂದಿರಾ ನಗರ ಗಳ ಧ್ವಜಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು ಉಪನ್ಯಾಸಕರಾದ ಮೋಹನ್ ಭಟ್ ಅವರು ಸ್ವಾಗತಿಸಿದರು. ರೊ.ಯಶವಂತ ಪಟವರ್ಧನ್, ರೊ.ದಯಾನಂದ ನಾಯಕ್, ರೊ.ಬಾಬು ಪೂಜಾರಿ, ರೊ.ಶ್ರೀಕಾಂತ ಕಾಮತ್ ಹಾಗೂ ವೆಂಕಟೇಶ್ ಮುಗುಳಿ ಇವರು ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶ್ರೀ ಗಣೇಶ್ ಆರ್.ಭಟ್ ಅವರು ಕಾರ್ಯವನ್ನು ನಿರೂಪಿಸಿದರು ಹಾಗೂ ಆನಂದ ಡಿ ಅವರು ವಂದಿಸಿದರು.