ಮಚ್ಚಿನ: ಶ್ರೀ ಅನಂತೇಶ್ವರರ ಸ್ವಾಮಿ ಕಂಬಳ ಸಮಿತಿ ಬಳ್ಳಮಂಜ-ಮಚ್ಚಿನ ಇದರ ವತಿಯಿಂದ ಶೇಷ-ನಾಗ ಜೋಡುಕರೆ ಕಂಬಳ ಕಾರ್ಯಕ್ರಮವು ಜ. 17ರಂದು ಬಳ್ಳಮಂಜ ಶ್ರೀ ಅನಂತೇಶ್ವರರ ಸ್ವಾಮಿ ದೇವಸ್ಥಾನದ ವಠಾರದಲ್ಲಿರುವ ಕಂಬಳಗದ್ದೆಯಲ್ಲಿ ನಡೆಯಲಿದ್ದು, ಇದರ ಪೂರ್ವ ತಯಾರಿ ಪ್ರಯುಕ್ತ ಜ.16 ರಂದು ಊರ ಸಮಸ್ತ ಗ್ರಾಮಸ್ಥರಿಂದ ಶ್ರಮದಾನ ಕಾರ್ಯ ನಡೆಯಿತು.
ಪುರಾತನ ಇತಿಹಾಸ ಇರುವ ಶೇಷ-ನಾಗ ಜೋಡುಕರೆ ಕಂಬಳವು ಜ.17 ರಂದು ಬೆಳಿಗ್ಗೆ ಉದ್ಘಾಟನೆಗೊಂಡು ಕಂಬಳ ಕೋಣಗಳಿಗೆ ನೇಗಿಲು ಹಿರಿಯ-ಕಿರಿಯ, ಹಗ್ಗ ಕಿರಿಯ-ಹಿರಿಯ ಹಾಗೂ ಹಡ್ಡ ಹಲಗೆ ಓಟದ ಸ್ಪರ್ಧೆ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅನೇಕ ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದು, ವಿಜೇತ ಕೋಣಗಳಿಗೆ ಬಹುಮಾನ ವಿತರಣೆ ನಡೆಯಲಿದೆ.