ಛಾಯಾಗ್ರಾಹಕರ ಸಂಘದಿಂದ ಮುದ್ದು ಕಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಗುರುವಾಯನಕೆರೆ:  ದ ಕ ಮತ್ತು ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮುದ್ದು ಕಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜ.15ರಂದು ಗುರುವಾಯನಕೆರೆ ಛಾಯಭವನದಲ್ಲಿ ಜರಗಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವಾಯನಕೆರೆಯ ಖ್ಯಾತ ವೈದ್ಯ ಡಾ|ವೇಣುಗೋಪಾಲ್ ಶರ್ಮ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ವೇಣುಗೋಪಾಲ್ ಶರ್ಮರವರು, ನಾನು ಒಂದು ಹವ್ಯಾಸಿ ಛಾಯಾಗ್ರಾಹಕನಾಗಿ ಒಂದು ಒಳ್ಳೆಯ ಫೋಟೋ ತೆಗೆಯುವ ಆಸೆ ಇತ್ತು. ಆದರೆ ನನ್ನ ಮತ್ತು ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕ ಸಂಘದ ಸದಸ್ಯರ ಒಂದು ಒಳ್ಳೆಯ ಬಾಂಧವ್ಯದ ನೆನಪುಗಳಿಂದ ಸಂಘದ ಕಾರ್ಯಕ್ರಮದಲ್ಲಿ  ನನ್ನ ವ್ಯೆದ್ಯಕೀಯ ಕ್ಷೇತ್ರದ ಸಾಧನೆಗಾಗಿ ಹ್ರದಯ ಸ್ಪರ್ಶಿ ಸನ್ಮಾನ ಮಾಡಿದ ನಿಮಗೆ ಅಭಿನಂದನೆಗಳು. ತಮ್ಮ ಸಂಘಟನೆ ಇನ್ನಷ್ಟು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವಂತಹ ಒಳ್ಳೆಯ ಸಂಘಟನೆಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ವಲಯದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಗೌರವಾಧ್ಯಕ್ಷ ಎನ್ ಎ ಗೋಪಾಲ್ ಅಳದಂಗಡಿ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕಿರಣ್ ಕುಮಾರ್ ಅಳದಂಗಡಿ, ಎಸ್ ಕೆ ಪಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್, ವಲಯದ ಪ್ರಧಾನ ಕಾರ್ಯದರ್ಶಿ ಗಂಗಾಧರ ಉಜಿರೆ, ಕೋಶಾಧಿಕಾರಿ ಪ್ರಭಾಕರ ಕಕ್ಕಿಂಜೆ, ಉಪಾಧ್ಯಕ್ಷ ಗಣೇಶ್ ವೇಣೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಮುದ್ದು ಕಂದ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.

ಸಂಘದ ಸದಸ್ಯ ಅಶೋಕ್ ಆಚಾರ್ಯ ಪ್ರಾರ್ಥಿಸಿ, ಸುರೇಶ್ ಬಿ ಕೌಡಂಗೆ ಸ್ವಾಗತಿಸಿದರು.  ಪಾಲಾಕ್ಷ ಪಿ ಸುವರ್ಣ ಪ್ರಾಸ್ತಾವಿಸಿ, ಮಾಜಿ ಅಧ್ಯಕ್ಷ ಕೆ ವಸಂತ್ ಶರ್ಮ ಉಜಿರೆ ಸನ್ಮಾನಿತರ ಪರಿಚಯವಿತ್ತರು. ಪತ್ರಿಕಾ ಪ್ರತಿನಿಧಿ ಮನು ಮದ್ದಡ್ಕ ಕಾರ್ಯಕ್ರಮ ನಿರೂಪಿಸಿ, ದಾಮೋದರ ಗುರುವಾಯನಕೆರೆ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.