ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್‌ಸ್ಕೂಲ್ ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಮತ್ತು ಶಿಕ್ಷಕ ಬಳಗದ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೆ.ಪಿ.ಎಸ್ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿ ಬೆಳೆಯಬೇಕು-ಹರೀಶ್ ಪೂಂಜಾ

ಪುಂಜಾಲಕಟ್ಟೆ:  ಘನ ಕರ್ನಾಟಕ ಸರಕಾರದ ಹೊಸ ಚಿಂತನೆಯಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುವ ಹೊಸ ಯೋಜನೆಯೇ ಕರ್ನಾಟಕ ಪಬ್ಲಿಕ್ ಶಾಲೆಗಳು. ಪ್ರತೀ ತಾಲೂಕಿಗೆ ಒಂದರಂತೆ ಈ ಶಾಲೆಗಳು ಮಂಜೂರುಗೊಂಡು ಇದೀಗ ಹೊಸ ಮನ್ವಂತರದತ್ತ ಹೆಜ್ಜೆ ಹಾಕುತ್ತಿವೆ. ಈ ಪುಂಜಾಲಕಟ್ಟೆಯೂ ಕೂಡಾ ಅದೇ ಸಾಲಿನಲ್ಲಿ ಮಿಂಚಬೇಕು ಎಂಬುದು ನನ್ನ ಪರಿಕಲ್ಪನೆಯಾಗಿದೆ. ಈ ಕಲ್ಪನೆಯು ಸಾಕಾರಗೊಳ್ಳಬೇಕಾದರೆ ಪೋಷಕರು, ಶಿಕ್ಷಕರು ಹಾಗೂ ಜನಪ್ರತಿನಿಧಿಗಳು ಒಂದೇ ಚಿಂತನೆಯಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕರಾದ ಹರೀಶ್ ಪೂಂಜಾರವರು ಹೇಳಿದರು.

ಅವರು ಕರ್ನಾಟಕ ಪಬ್ಲಿಕ್‌ಸ್ಕೂಲ್‌ನ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳ ಶಾಲಾಭಿವೃದ್ಧಿ & ಮೇಲುಸ್ತುವಾರಿ ಸಮಿತಿ, ಶಿಕ್ಷಕ ಬಳಗದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈಗಾಗಲೇ ಸಿ.ಎಸ್.ಆರ್ ಅನುದಾನವನ್ನು ತಾಲೂಕಿಗೆ ತರಿಸುವಲ್ಲಿ ನಾನು ಯಶಸ್ವಿಯಾಗಿದ್ದರೆ ಅದಕ್ಕೆ ಮೂಲ ಕಾರಣ ನಿಮ್ಮೆಲ್ಲರ ಸಹಕಾರವಾಗಿದೆ. ಇದೀಗ ಈ ಸಂಸ್ಥೆಗೆ 2 ಕೋಟಿಗಳ ಅನುದಾನ ಮಂಜೂರಾತಿಯಾಗಿದ್ದು, ಈ ಅನುದಾನ ಸದ್ಭಳಕೆಯು ಸುಸಜ್ಜಿತ ಕಟ್ಟಡದೊಂದಿಗೆ ಪೂರ್ಣಗೊಳ್ಳಬೇಕು. ಈ ರೀತಿಯಾಗಿ ಮಾಡಿದಾಗ ಶಾಲೆಯ ಮೂಲಭೂತ ಅವಶ್ಯಕತೆಗಳು ಸಂಪನ್ನತೆಗೊಳ್ಳುತ್ತವೆ. ಪ್ರತೀ ಸಂಸ್ಥೆಗೊಂದು ದೂರದರ್ಶಿತ್ವದ ನೀಲನಕಾಶೆ ಮಾಡಿಕೊಂಡಿರಬೇಕು. ಇದು ಕೇವಲ ಪುಂಜಾಲಕಟ್ಟೆಗೆ ಸೀಮಿತವಾಗದೇ ತಾಲೂಕಿನ ಪ್ರತೀ ಶಾಲೆಯವರು ಹಾಗೂ ಸರಕಾರಿ ಸಂಸ್ಥೆಗಳು ಈ ಯೋಜನೆಯನ್ನು ಮಾಡಿಕೊಳ್ಳಲೇ ಬೇಕು. ಈಗಾಗಲೇ ಈ ಸಂಸ್ಥೆ 60 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ನೆನಪಿಗಾಗಿ ಷಷ್ಠಬ್ದಿ ಸಮಾರಂಭವನ್ನು ಹಳೆ ವಿದ್ಯಾರ್ಥಿಗಳನ್ನು ಜೊತೆಗೂಡಿಸಿ ನಾವೆಲ್ಲ ಮಾಡೋಣ. ಆದರೆ ಆ ಸಂದರ್ಭದಲ್ಲಿ ಊರವರ ಕೊಡುಗೆ ಅತೀ ಹೆಚ್ಚು ದೊರಕಿದಾಗ ಮಾತ್ರ ಈ ಸಮಾರಂಭಕ್ಕೆ ಅರ್ಥ ಬರುತ್ತದೆ ಎಂದರು.

ಕುವೆಟ್ಟು ಕ್ಷೇತ್ರದ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಉಪಸ್ಥಿತರಿದ್ದು ಸಮಯೋಚಿತ ವಿಚಾರಧಾರೆಯನ್ನು ಹಂಚಿಕೊಂಡರು. ವೇದಿಕೆಯಲ್ಲಿ ಮಡಂತ್ಯಾರು ಕ್ಷೇತ್ರದ ತಾ. ಪಂ. ಸದಸ್ಯೆ ವಸಂತಿ ಲಕ್ಷ್ಮಣ್, ಮಡಂತ್ಯಾರು ಗ್ರಾ.ಪಂ. ಸದಸ್ಯರಾದ ಹನೀಫ್ ಮತ್ತು ಸಾರಾ ಸನತ್, ಕಾಲೇಜು ವಿಭಾಗದ ಶಾಲಾಭಿವೃದ್ಧಿ ಸಮಿತಿ  ಉಪಾಧ್ಯಕ್ಷ  ಸಂಜೀವ ಶೆಟ್ಟಿ ಮುಗೆರೋಡಿ, ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಗಿರೀಶ್ ಮೂಲ್ಯ, ಪ್ರಾಥಮಿಕ ಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ  ಜಯರಾಮ ಶೆಟ್ಟಿ ಹಾಗೂ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ ಅಜಿಲ ಹಾಗೂ ಸಹಾಯಕ ಅಭಿಯಂತರ ಗುರುಪ್ರಸಾದ್ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲೆ ಪುಷ್ಪಲತಾ ಹೆಚ್.ಡಿರವರು ಸಂಸ್ಥೆಯ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು. ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಉದಯ ಕುಮಾರ್ ಬಿ. ರವರು ನಮ್ಮ ಸಂಸ್ಥೆ ಮುನ್ನಡೆಯಲು ಸಹಕಾರವನ್ನು ಕೋರಿ ಅಗತ್ಯ ಬೇಡಿಕೆಗಳನ್ನು ಮಂಡಿಸಿದರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕ ಮೋನಪ್ಪ ಕೆ.  ಶಾಲಾ ಅವಶ್ಯಕತೆಗಳನ್ನು ಶಾಸಕರ ಮುಂದಿಟ್ಟರು. ಸಭೆ ಅಂತಿಮಗೊಂಡ ಬಳಿಕ ಶಾಸಕರು ಕೆ.ಪಿ.ಎಸ್ ಪುಂಜಾಲಕಟ್ಟೆಯ ಮುಂದಿನ ಕಟ್ಟಡ ನಿರ್ಮಾಣದ ಸ್ಥಳವನ್ನು ಪರಿಶೀಲಿಸಿ ಅಭಿಯಂತರರೊಂದಿಗೆ ಚರ್ಚಿಸಿ ಅಂತಿಮ ರೂಪಕ್ಕೆ ಸ್ಪರ್ಷವನ್ನು ನೀಡಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರೌಢಶಾಲಾ ಶಿಕ್ಷಕ  ಗೋಪಾಲ ಸ್ವಾಗತಿಸಿ,  ಪ್ರೌಢಶಾಲಾ ವಿಭಾಗದ ಕಲಾಶಿಕ್ಷಕ  ಧರಣೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿ, ಆಂಗ್ಲಭಾಷಾ ಶಿಕ್ಷಕ ಹರಿಪ್ರಸಾದ್ ಆರ್. ರವರ ಧನ್ಯವಾದವಿತ್ತರು. ಸರ್ವ ಬೋಧಕ ಮತ್ತು ಬೋಧಕೇತರ ಬಂಧುಗಳ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.