ಧರ್ಮಸ್ಥಳ: ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನಿಧಿ ಸಮರ್ಪಣಾ ಅಭಿಯಾನಕ್ಕೆ ಧರ್ಮಸ್ಥಳ ಗ್ರಾಮದ ನಾರ್ಯ- ದೊಂಡೋಲೆ-ಕುರ್ಮಾಣಿ ಭಾಗದ ಸಾರ್ವಜನಿಕರ ಉಪಸ್ಥಿತಿಯಲ್ಲಿ ಜ.15ರಂದು ದೊಂಡೋಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಶ್ರೀ ಸುಬ್ರಮಣ್ಯ ದೇವಸ್ಥಾನದ ಅರ್ಚಕ ರಾಮಪ್ರಸಾದ್ ಪಾಂಗಣ್ಣಾಯ, ಪೂಜೆ ಸಲ್ಲಿಸಿ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾ.ಪಂ. ಸದಸ್ಯ ಸುಧಾಕರ್ ಧರ್ಮಸ್ಥಳ, ಸೂರ್ಯನಾರಾಯಣ ರಾವ್ ದೊಂಡೋಲೆ, ಮನೋಹರ್ ಪೂಜಾರಿ ದೊಂಡೋಲೆ, ಪದ್ಮ ಗೌಡ ಹಿಪ್ಪ, ಮಮತ, ಶೀನ ನಾರ್ಯ, ಸಂಧ್ಯಾ ಭಟ್ ದೊಂಡೋಲೆ, ಚಂದ್ರಹಾಸ ಶೆಟ್ಟಿ ನಾರ್ಯ, ಗೀತಾ ಕೂರ್ಮಾನಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಜನರಿಂದಲೇ ದೇಣಿಗೆ ಸಂಗ್ರಹಿಸುವುದು ಈ ಅಭಿಯಾನದ ಉದ್ದೇಶವಾಗಿದೆ.