ಗಂಡ ಹೆಂಡಿರ ಜಗಳ: ವಿಚಾರಿಸಲು ಹೋದ ಪುಂಜಾಲಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ ಮೇಲೆ ಹಲ್ಲೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಆರೋಪಿಗೆ ನ್ಯಾಯಾಂಗ ಬಂಧನ

ಪುಂಜಾಲಕಟ್ಟೆ: ಪರಸ್ಪರ ಜಗಳವಾಡುತ್ತಿದ್ದ ದಂಪತಿಯನ್ನು ವಿಚಾರಿಸಲು ಹೋದ ಪುಂಜಾಲಕಟ್ಟೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಕೊರಗಟ್ಟೆ ಎಂಬಲ್ಲಿ ನಡೆದಿದೆ. ಆರೋಪಿ ಗಣೇಶ್ ರವರ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯ ವಿವರ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆ ನಿವಾಸಿ ಗಣೇಶ್ ಹಾಗೂ ಆತನ ಪತ್ನಿಯೊಂದಿಗೆ ಪರಸ್ಪರ ಜಗಳ ನಡೆಯುತ್ತಿದ್ದು, ಪರಿಣಾಮ ವಿಕೋಪಕ್ಕೆ ತೆರಳಿ ಪತ್ನಿಗೆ ಹಲ್ಲೆ ನಡೆಸುತ್ತ್ತಿರುವುದನ್ನು ಗಮನಿಸಿದ ನೆರೆ ಮನೆಯವರು ಈ ಬಗ್ಗೆ 112 ಸಹಾಯವಾಣಿಗೆ ಕರೆಮಾಡಿ ವಿಚಾರ ತಿಳಿಸಿದ್ದರು.
ಕೂಡಲೇ ಕಾರ್ಯಪವೃತ್ತರಾದ ಪುಂಜಾಲಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ ನವೀನ ಮತ್ತು ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಗಲಾಟೆಯಲ್ಲಿ ನಿರತರಾಗಿದ್ದ ಆರೋಪಿ ಗಣೇಶ್‌ರವರನ್ನು ಪ್ರಶ್ನಿಸಿದ್ದು, ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಹಲ್ಲೆ ನಡೆಸಿ ಬಳಿಕ ಜೀವ ಬೆದರಿಕೆಯೊಡ್ಡಿದ್ದಾರೆ.
ಸಿಬ್ಬಂದಿಯ ಮೇಲಿನ ಹಲ್ಲೆ ಹಾಗೂ ಜೀವ ಬೆದರಿಕೆಯ ದೂರಿನ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಎಸ್.ಐ. ಸೌಮ್ಯರವರು ಆರೋಪಿ ಗಣೇಶ್ ರವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯವು ವಿಚಾರ ನಡೆಸಿ ಆರೋಪಿ ಗಣೇಶ್ ರವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.