ಉಜಿರೆ ಶ್ರೀ ಜನಾರ್ದನ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ ಆರಂಭ

 

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜ. 14 ಮಕರ ಸಂಕ್ರಮಣದಂದು ರಾತ್ರಿ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯ ರಾಘವ ಪಡುವೆಟ್ನಾಯರ ನೇತೃತ್ವದಲ್ಲಿ  ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ  ತಾಂತ್ರಿಕ ವಿಧಿ ಹಾಗು  ಧ್ವಜಾರೋಹಣದೊಂದಿಗೆ  ಆರಂಭಗೊಂಡಿತು.

ಶ್ರೀ ದೇವರು ಹಾಗೂ ಪರಿವಾರ ದೇವರ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವವು ನಿರ್ವಿಗ್ನವಾಗಿ ನೆರವೇರುವಂತೆ ಪ್ರಾರ್ಥಿಸಲಾಯಿತು. ಬದಿ ಮೇಲೆ ಭಂಡಾರ ಏರುವುದರೊಂದಿಗೆ ವಿಧಿವಿಧಾನಗಳಿಗೆ ಚಾಲನೆ ದೊರೆಯಿತು .

ಪ್ರತಿದಿನ  ಅನುಕ್ರಮವಾಗಿ ಬದಿ ಮೇಲೆ ಉಲ್ಲಾಳ್ತಿ ,ಪೊಸಲ್ತಾಯಿ, ಕುಮಾರಸ್ವಾಮಿ  ದೈವಗಳಿಗೆ ನೇಮ, ನೆತ್ತರ  ಮುಗುಳಿ ದೈವದ  ನೇಮ ಹಾಗು ಭಂಡಾರ ಇಳಿದು ದೇವಸ್ಥಾನದಲ್ಲಿ ಶ್ರೀ ಕೃಷ್ಣ ಮಂಟಪ ಉತ್ಸವ , ಅಶ್ವತ್ಥಕಟ್ಟೆ ಉತ್ಸವ ,ಪುಷ್ಕರಣಿ ಕಟ್ಟೆ  ಉತ್ಸವ ,ಪೇಟೆ ಸವಾರಿ ಉತ್ಸವ, ಚಂದ್ರಮಂಡಲ ಉತ್ಸವ, ಜ .21 ರಂದು ಬೆಳಿಗ್ಗೆ ದರ್ಶನ ಬಲಿ ಉತ್ಸವ, ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗು ರಾತ್ರಿ ಮಹಾರಥೋತ್ಸವ, ಶ್ರೀ ಭೂತಬಲಿ  ನಡೆಯಲಿದೆ. ಜ 22   ರಂದು  ಕವಾಟೋದ್ಘಾಟನೆ  ಹಾಗು ರಾತ್ರಿ ಧ್ವಜಾವರೋಹಣ ,ಜ .23  ರಂದು ಕಲಶಾಭಿಷೇಕ ಹಾಗು ಸಂಪ್ರೋಕ್ಷಣೆ ನಡೆಯುವುದರೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ . ಕೊರೊನ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ  ಪ್ರತಿದಿನ ಅನ್ನಸಂತರ್ಪಣೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ವೈದಿಕ ಕಾರ್ಯಕ್ರಮಗಳು ವಿಧಿಯಂತೆ ನಡೆಯುತ್ತದೆ ಎಂದು  ದೇವಸ್ಥಾನದ ಪ್ರಕಟಣೆ ತಿಳಿಸಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.