ನಾವೂರು: ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ನಾವೂರು ಇದರ ಆಶ್ರಯದಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಧನುಪೂಜೆ ಹಾಗೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮವು ಜ.14 ರಂದು ಸಂಪನ್ನಗೊಂಡಿತು.
ಕಾರ್ಯಕ್ರಮದ ವಿಶೇಷ ಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್ ಮಂಜುನಾಥ್ ರವರು ಜ.31ರಿಂದ ಫೆ.1ರವರೆಗೆ ನಡೆಯಲಿರುವ ದೇವಸ್ಥಾನದ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿಷ್ಣು ಸಹಸ್ರನಾಮ ಪಠಣದ ಮಹತ್ವ ಮತ್ತು ಇಂದಿನ ಕಾಲಕ್ಕೆ ಅದರ ಪ್ರಸ್ತುತತೆಯನ್ನು ಜನರಿಗೆ ತಿಳಿಸಿಕೊಟ್ಟರು. ಈಗಿನ ಡಿಜಿಟಲ್ ಯುಗದಲ್ಲಿ ಗೂಗಲ್ ಮೀಟ್ ಅನ್ನು ಧಾರ್ಮಿಕ ಕೆಲಸಗಳಿಗೆ ಬಳಸಿಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರಸ್ಟ್ನ ಅಧ್ಯಕ್ಷ ಎ.ಬಿ ಉಮೇಶ್ ಮಾತನಾಡಿ, ಧರ್ಮಸ್ಥಳದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಹಾಗೂ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರ ಗೌರವಾಧ್ಯಕ್ಷತೆಯಲ್ಲಿ ಜ.31ರಿಂದ ಫೆ.1 ರವರೆಗೆ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಪ್ರತಿಷ್ಠಾ ವರ್ಧಂತಿ ಉತ್ಸವ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಯಶಸ್ವಿಯಾಗಿ ನಡೆಸಿಕೊಡಬೇಕೆಂದು ವಿನಂತಿಸಿದರು.
ಕೊಲ್ಲಿಯ ಶ್ರೀಧರ ಪೂಜಾರಿ ಮತ್ತು ಬಳU ಸ್ಯಾಕ್ಸೋಫೋನ್ ವಾದನ ನಡೆಸಿಕೊಟ್ಟರು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಅಶ್ವಿನಿ ಭಟ್ ವೈದಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಜಾತ್ರಾ ಸಮಿತಿ ಅಧ್ಯಕ್ಷ ಡಾ ಪ್ರದೀಪ್ ಎ ರವರು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣವನ್ನು ನಡೆಸಿಕೊಟ್ಟರು.
ಮಂಗಳೂರಿನ ಉದ್ಯಮಿ ಮಾಧವ ಜೋಗಿತ್ತಾಯ ದಂಪತಿ, ಉಜಿರೆಯ ದಂತ ವೈದ್ಯ ಡಾ. ಎಂ.ಎಂ ದಯಾಕರ್, ಪೂನಾದ ಉದ್ಯಮಿ ಸುಬ್ರಹ್ಮಣ್ಯ ಭಟ್ ಮತ್ತು ಮನೆಯವರು, ಬೆಂಗಳೂರಿನ ಮಮತಾ ಅಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಸುಮಂತ ಹೆಗ್ಡೆ ಮತ್ತು ಮನೆಯವರು, ಆಳ್ವಾಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಅನಿಲ್ ಕುಮಾರ್ ರೈ ಮತ್ತು ಡಾ. ಪ್ರಸನ್ನ ಐತಾಳ್, ಉಜಿರೆ ಶ್ರೀ ಧ ಮ ಕಾಲೇಜಿನ ಕಂಪ್ಯೂಟರ್ ಪ್ರಾಧ್ಯಾಪಕ ಕೇಶವ ಪೈ, ಬಿ.ಎಸ್ ಎನ್.ಎಲ್ನ ನಿವೃತ್ತ ಇಂಜಿನಿಯರ್ ಅಣ್ಣಿ ಪೂಜಾರಿ ದಂಪತಿ, ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಹಿರಿಯ ಪ್ರಬಂಧಕ ಸೂರ್ಯನಾರಾಯಣ ಭಟ್ ಬೊಳಿಯಂಜಿ, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಶ್ರೀನಾಥ್, ಬೆಳ್ತಂಗಡಿ ಉದ್ಯಮಿ ವಸಂತ ಜೈನ್ ಮತ್ತು ಪ್ರದೀಪ್ ವಿ.ಜಿ ಮನೆಯವರು, ಗುರುವಾಯನಕೆರೆ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಜಗನ್ನಾಥ್ ಮತ್ತು ಮನೆಯವರು, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಇದರ ಉಪಾಧ್ಯಕ್ಷ ಗಣೇಶ್ ಕಣಾಲ್, ಕಾರ್ಯದರ್ಶಿ ಗಣೇಶ್ ಗೌಡ ನೆಲ್ಲಿಪಲ್ಕೆ, ಟ್ರಸ್ಟಿಗಳಾದ ಧರ್ಣಪ್ಪ ಮೂಲ್ಯ ಕಾಯರ್ದಡಿ, ಹರೀಶ್ ಸಾಲ್ಯಾನ್ ಮೊರ್ತಾಜೆ, ಮ್ಮಪ್ಪ ಜಿ ಉಪಸ್ಥಿತರಿದ್ದರು.
ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹರೀಶ್ ಕಾರಿಂಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಧನ್ಯವಾದಗಳು 🙏