ಬೆಳ್ತಂಗಡಿ ಅಖಿಲ ಕರ್ನಾಟಕ ತ್ರಿಮತಸ್ಥ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ನ ಮಾಸಿಕ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಖಿಲ ಕರ್ನಾಟಕ ತ್ರಿಮತಸ್ಥ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ (ನೋ) ಬೆಳ್ತಂಗಡಿ ತಾಲೂಕು ಘಟಕದ ಮಾಸಿಕ ಸಭೆಯು ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಶ್ರೀಕೃಷ್ಣಕುಮಾರ ಐತಾಳ, ಪಂಜಿರ್ಪು ಇವರ ಮನೆಯಲ್ಲಿ ಶ್ರೀರವಿಕುಮಾರ್ ಭಟ್, ಪಜಿರಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ನಮ್ಮ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತಿನ ವತಿಯಿಂದ ಉಪನೀತ ಬ್ರಾಹ್ಮಣ ಅಭ್ಯರ್ಥಿಗಳಿಗೆ ನಿತ್ಯ ದೇವತಾರ್ಚನೆ ತರಬೇತಿ ಶಿಬಿರವನ್ನು ಪ್ರಾರಂಭಿಸುವುದರ ಬಗ್ಗೆ ಚರ್ಚಿಸಿ ಫೆಬ್ರವರಿ 5ರಿಂದ ಶಿಬಿರವನ್ನು ಆರಂಭಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವುವನ್ನು ಪಡೆದ ಬ್ರಾಹ್ಮಣ ಅಭ್ಯರ್ಥಿಗಳನ್ನು ಸಭೆಗೆ ಆಹ್ವಾನಿಸಿ ಪರಿಷತ್ತಿನ ವತಿಯಿಂದ ಗೌರವಿಸಲಾಯಿತು.  ಕುವೆಟ್ಟು ಗ್ರಾಮದಿಂದ ರಚನಾ.ಕೆ, ಕಲ್ಮಂಜ ಗ್ರಾಮದಿಂದ ಕೃಷ್ಣಮೂರ್ತಿ ಹೆಬ್ಬಾರ್, ಶಿಶಿಲ ಗ್ರಾಮದಿಂದ ಯತೀಶ ಯಳಚಿತ್ತಾಯ, ನಿಡ್ಲೆ ಗ್ರಾಮದಿಂದ ಪ್ರವೀಣ ಹೆಬ್ಬಾರ್, ಮತ್ತು ಅರಸಿನಮಕ್ಕಿ ಗ್ರಾಮದಿಂದ ಸುಧೀರ್ ಕುಮಾರ್. ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಹಾಗೂ ವಲಯ ಸಂಚಾಲಕ ಮತ್ತು ನಿರ್ದೇಶಕರು ಹಾಜರಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.