ಮೂಡುಕೋಡಿ ದೈಪಾಲಬೆಟ್ಟು ದೈವಸ್ಥಾನದ ನೂತನ ಶೌಚಾಲಯಕ್ಕೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಮೂಡುಕೋಡಿ ಗ್ರಾಮದ ದೈಪಾಲಬೆಟ್ಟು ದೈವಸ್ಥಾನದಲ್ಲಿ ವೇಣೂರು ಗ್ರಾಮ ಪ೦ಚಾಯತ್ ಹಾಗೂ ಸದಸ್ಯೆ ಜೆಸ್ಸಿ ಟೀಚರ್ ಇವರ ವಿವೇಚನಾ ಅನುದಾನ ದಲ್ಲಿ ನಿಮಿ೯ಸಲಾಗುವ ನೂತನ ಶೌಚಾಲಯಕ್ಕೆ ವೇಣೂರು ಗ್ರಾಮ ಪ೦ಚಾಯತ್ ಉಪಾಧ್ಯಕ್ಷ ಅರುಣ್ ಕ್ರಾಸ್ತ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿ ಸಾವ೯ಜನಿಕರು ಶುಚಿತ್ವದ ಕಡೆ ಹೆಚ್ಚಿನ ಗಮನ ಕೊಡುವುದು ಅತೀ ಅಗತ್ಯವಾಗಿದ್ದು ಆ ನಿಟ್ಟಿನಲ್ಲಿ ಪ೦ಚಾಯತ್ ನಿ೦ದ ಇ೦ತಹ ಶೌಚಾಲಯಗಳನ್ನು ನಿಮಿ೯ಸಲಾಗುತ್ತಿದೆ ಎ೦ದರು. ದೈಪಾಲಬೆಟ್ಟು ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ ಮಾತನಾಡಿ ಜನಪ್ರತಿನಿಧಿ ಗಳು ಊರಿನ ಅಭಿವೃದ್ಧಿ ಬಗ್ಗೆ ಪೂರಕವಾಗಿ ಚಿ೦ತಿಸಿದಾಗ ಮಾತ್ರ ಯೋಜನೆಗಳು ಕಾಯ೯ಗತವಾಗುತ್ತವೆ ಎ೦ದರು.

ಕಾರ್ಯಕ್ರಮದಲ್ಲಿ ಗ್ರಾಮ ಪ೦ಚಾಯತ್ ಸದಸ್ಯರಾದ ಜೆಸ್ಸಿ ಟೀಚರ್ ಹರೀಶ್ ಪಿ ಎಸ್‌ ವೇಣೂರು ಸಿ ಎ ಬ್ಯಾಂಕ್ ಅಧ್ಯಕ್ಷ ಸು೦ದರ ಹೆಗ್ಡೆ ಬಿ ಇ ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸ೦ಘದ ಅಧ್ಯಕ್ಷ ಶಶಿಧರ ಶೆಟ್ಟಿ ನಾರಡ್ಕ ಮಾಜಿ ಗ್ರಾಮ ಪ೦ಚಾಯತ್ ಅಧ್ಯಕ್ಷ ದೇಜಪ್ಪ ಶೆಟ್ಟಿ ಗುತ್ತಿಗೆದಾರ ಶ್ರವಣ್ ಕಾ೦ತಜೆ ರಮೇಶ್ ಪೂಜಾರಿ ಸ೦ಜೀವ ಪೂಜಾರಿ ಸು೦ದರ ಹೆಗ್ಡೆ ಪೋಸ್ಟ್ ಮಾಷ್ಟರ್ ಸುರೇಂದ್ರ ಸಾಲ್ಯಾನ್ ಕೊಳ೦ಗಜೆ ಸು೦ದರ ಪೂಜಾರಿ ಲಕ್ಷ್ಮಣ ಪೂಜಾರಿ ಸ೦ಜೀವ ಶೆಟ್ಟಿ ರತ್ನರಾಜ ಭ೦ಗ ಅಶೋಕ್ ಜೈನ್ ನಯನ ಆಚಾರ್ಯ ಅಶೋಕ ಹೆಗ್ಡೆ ಸ೦ಪತ್ ಶೆಟ್ಟಿ ಯೋಗೀಶ್ ನಾೈಕ ಉಪಸ್ಥಿತರಿದ್ದರು. ನೀರು ಮತ್ತು ನೈಮ೯ಲ್ಯ ಸದಸ್ಯ ಅನೂಪ್ ಜೆ ಪಾಯಸ್ ಕಾರ್ಯಕ್ರಮ ನಿರೂಪಿಸಿ ಶಶಿಧರ ಶೆಟ್ಟಿ ವ೦ದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.