ಬೆಳ್ತಂಗಡಿ: ಇಲ್ಲಿಯ ಹಳೆಕೋಟೆ, ವಿನಾಯಕ ರೈಸ್ ಇಂಡಸ್ಟ್ರೀಸ್ ಬಳಿ ಚಾಮುಂಡೇಶ್ವರಿ ವಾಣಿಜ್ಯ ಸಂಕಿರ್ಣ ಮತ್ತು ಚಾಮುಂಡೇಶ್ವರಿ ವಿದ್ಯುತ್ ಚಾಲಿತ ಇ-ಮೋಟಾರ್ಸ್ ಮಳಿಗೆ ಜ.14 ರಂದು ಶುಭಾರಂಭಗೊಂಡಿದೆ.
ಸ್ಕೂಟರ್ ಬ್ಯಾಟರಿ ಚಾಲಿತ ಇಲೆಕ್ಟ್ರಿಕ್ ಇ-ಮೋಟಾರ್ಸ್ ಸಂಸ್ಥೆಯನ್ನು ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿದ್ದರು, ಹಾಗೂ ವಾಣಿಜ್ಯ ಸಂಕೀರ್ಣವನ್ನು ಮಾಜಿ ಶಾಸಕ ವಸಂತ ಬಂಗೇರ ಕೆ ನೆರವೇರಿಸಿದ್ದರು.
ವೇದಮೂರ್ತಿ ಶ್ರೀ ಜಗದೀಶ್ ಐತಾಳ್ ಪೊಸೊಟ್ಟು ದೀಪ ಪ್ರಜ್ವಲಿಸಿದ್ದರು. ಪ್ಯೂರ್ ಎನರ್ಜಿ ಪ್ರೈ.ಲಿ. ಟೆರಿಟರಿ ಮೆನೇಜರ್ ಸಚಿನ್ ಎಸ್. ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಟಿ, ಮಾಲಕ ಗೋವಿಂದ ಹೊಳ್ಳ, ಸುಧೀರ್ ಹೊಳ್ಳ, ಮ್ಯಾನೇಜರ್ ದಿನೇಶ್ ಜೈನ್ ಉಪಸ್ಥಿತರಿದ್ದರು. ಶಿಕ್ಷಕ ವಿಷ್ಣು ಪ್ರಕಾಶ್ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದ್ದರು. ಶಿಕ್ಷಕ ಮಹೇಶ್ ರಾವ್ ಸಹಕರಿಸಿದರು.