ನಾಳ ಧನು ಸಂಕ್ರಮಣ ವಿಶೇಷ ಪೂಜೆ ಮತ್ತು ವರ್ಷಾವಧಿ ಜಾತ್ರಾ ಅಮಂತ್ರಣ ಪತ್ರ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.24 ರಿಂದ 30 ರ ತನಕ ನಡೆಯುವ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರ ಬಿಡುಗಡೆಯನ್ನು ಜ.14 ರಂದು ಮಕರ ಸಂಕ್ರಾಂತಿಯ ವಿಶೇಷ ಧನು ಪೂಜೆ ಸಂದರ್ಭದಲ್ಲಿ ಭಕ್ತರ ಸಮ್ಮುಖದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ,ನಿಕಟ ಪೂರ್ವ ಅಧ್ಯಕ್ಷ ವಸಂತ ಮಜಲು, ಪ್ರಧಾನ ಅರ್ಚಕ ವೇ.ಮೂ.ರಾಘವೇಂದ್ರ ಅಸ್ರಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ, ದಿನೇಶ್ ಗೌಡ ಕಲಾಯಿತೊಟ್ಟು,ಅಂಬಾ ಬಿ.ಆಳ್ವ, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡ ಕೊಡಂಗೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಬೆಳ್ತಂಗಡಿ “ಸುದ್ದಿ ಪತ್ರಿಕೆ”ಮುಖ್ಯ ವರದಿಗಾರ ರಾದ ಬಿ.ಎಸ್.ಕುಲಾಲ್. ನಾಳ ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ನಾಳ, ದೇವಳ ಕಛೇರಿ ಪ್ರಬಂಧಕ ಗಿರೀಶ್ ಶೆಟ್ಟಿ ಗೇರುಕಟ್ಟೆ, ಕಳಿಯ ಪಂಚಾಯತು ಮಾಜಿ ಅಧ್ಯಕ್ಷ ತುಕರಾಮ ಪೂಜಾರಿ, ಕಳಿಯ ಪಂಚಾಯತು ಸದಸ್ಯರಾದ ವಿಜಯ ಗೌಡ ಕೆ, ಸುಧಾಕರ್ ಮಜಲು, ಮೋಹಿನಿ ಬಿ.ಗೌಡ, ಪುಷ್ಪಲತಾ ನಾಳ, ಕಳಿಯ ಸಿಎ ಬ್ಯಾಂಕ್ ಕಾರ್ಯ ನಿರ್ವಹಣಾಧಿಕಾರಿ ಸತ್ಯಶಂಕರ್ ಭಟ್, ಉದ್ಯಮಿ ಸುರೇಶ್ ಕುಮಾರ್ ಆರ್.ಎನ್, ಕೊಂಕಣ್ ರೈಲ್ವೆ ಅಧಿಕಾರಿ ಸತೀಶ್ ಕುಮಾರ್ ಅರ್.ಎನ್, ಅಶೋಕ ಆಚಾರ್ಯ ಗಂಪದಡ್ಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಲೆಕ್ಕ ಪರಿಶೋಧಕಿ ಸುಗುಣ ಎಸ್.ಆಳ್ವ, ಸ್ಥಳೀಯರಾದ ಪುರಂದರ ಶೆಟ್ಟಿ ನಾಳ, ವ್ಯವಸ್ಥಾಪನ ಸಮಿತಿ,ಅಭಿವೃದ್ಧಿ ಸಮಿತಿ, ಜಾತ್ರೋತ್ಸವ ಸಮಿತಿ, ಕೇಶರಿ ಗೆಳೆಯರ ಬಳಗ ಸದಸ್ಯರು ಹಾಗೂ ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.