ಎಲ್‌ಐಸಿ ಗೋಲ್ಡನ್ ಜುಬ್ಲಿ ಫೌಂಡೇಶನ್‌ನಿಂದ ಸೌತಡ್ಕ ಸೇವಾಧಾಮಕ್ಕೆ ಸೋಲಾರ್ ಪವರ್ ಸಿಸ್ಟಮ್ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ :- ಸೇವಾಭಾರತಿಯ ಅಂಗಸಂಸ್ಥೆಯಾದ ಸೌತಡ್ಕ ಸೇವಾಧಾಮದಲ್ಲಿ ಭಾರತೀಯ ಜೀವಾ ವಿಮಾ ನಿಗಮ ಗೋಲ್ಡನ್ ಜುಬ್ಲೀ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಸೋಲಾರ್ ಪ್ಯಾನಲ್ ಹಾಗೂ ವಾಟರ್ ಹೀಟರ್ ಉದ್ಘಾಟನ ಸಮಾರಂಭ ಜ.13 ರಂದು ನೆರವೇರಿತು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಎಲ್. ಐ. ಸಿ ಯ ರೀಜನಲ್ ಮ್ಯಾನೇಜರ್ ಎಮ್. ಜಗನ್ನಾಥ್ ಮಾತನಾಡಿ, ಫೌಂಡೇಶನ್ ವತಿಯಿಂದ 101ಕೋಟಿ ರೂಪಾಯಿಗಳ ಸೇವಾಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ ಮುಂದೆ ಕೂಡ ಎಲ್. ಐ. ಸಿ ಫೌಂಡೇಶನ್ ವತಿಯಿಂದ ಸಮಾಜದ ಚಟುವಟಿಕೆಗಳ ಬಗ್ಗೆ ಕೊಡುಗೆ ನೀಡುವಲ್ಲಿ ಭರವಸೆ ಇಟ್ಟಿದ್ದಾರೆ.

ಉಡುಪಿಯ ಸೀನಿಯರ್ ಡಿವಿಷನಲ್ ಮ್ಯಾನೇಜರ್ ಶ್ರೀಮತಿ ಬಿಂದು ರಾಬರ್ಟ್ ರವರು ಸೇವಾಧಾಮದ ಸೇವಾಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಉಡುಪಿಯ ಮಾರ್ಕೆಟಿಂಗ್ ಮ್ಯಾನೇಜರ್ ವಿ. ಶಿರೂರ್, ಬಂಟ್ವಾಳದ ಚೀಫ್ ಮ್ಯಾನೇಜರ್ ಪಿ. ಸಿ. ನಾಯಕ್ ಮತ್ತು ಉಡುಪಿಯ ಹೆಲ್ತ್ ಇನ್ಶೂರೆನ್ಸ್ ಮ್ಯಾನೇಜರ್ ಎ. ಮೋಹನ್ ದಾಸ್, ಬೆಳ್ತಂಗಡಿ ಉಪಗ್ರಹ ಶಾಖೆಯ ಮ್ಯಾನೇಜರ್ ದೇವಪ್ಪ ನಾಕ. ಪಿ, ಬೆಳ್ತಂಗಡಿಯ ಅಭಿವೃದ್ಧಿ ಅಧಿಕಾರಿ ಉದಯ ಶಂಕರ್ ,ಶ್ರೀ ವಿನಾಯಕ ಸೇವಾ ಟ್ರಸ್ಟ್, ಸೌತಡ್ಕದ ಅಧ್ಯಕ್ಷ ಕೃಷ್ಣಾ ಭಟ್,ಮತ್ತು ಸೇವಾಭಾರತಿಯ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಸೇವಾಭಾರತಿಯ ಸೇವಾಕಾರ್ಯ ಬಗ್ಗೆ ವಿವರಿಸುತ್ತಾ ಸೇವಾಧಾಮಕ್ಕೆ ಕೊಡುಗೆಯಾಗಿ ನೀಡಿದ ಸೋಲಾರ್ ಪ್ಯಾನಲ್ ಹಾಗೂ ವಾಟರ್ ಹೀಟರ್‌ಗಳ ಕೊಡುಗೆಯನ್ನು ಪ್ರಶಂಸಿಸುತ್ತಾ ಹಾಗೂ ಇದಕ್ಕೆ ಎಲ್. ಐ. ಸಿ ಸಂಸ್ಥೆಗೆ ಹಾಗೂ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಸೇವಾಭಾರತಿಯ ಕಾರ್ಯದರ್ಶಿ ಸ್ವರ್ಣಗೌರಿ ಸಂಸ್ಥೆಯ ಹುಟ್ಟು ಈಗಿನ ಬೆಳವಣಿಗೆ ಹಾಗೂ ಮುಂದಿನ ಕಾರ್ಯ ಯೋಜನೆ ಬಗ್ಗೆ ವಿವರಿಸಿದರು. ಸೇವಾಭಾರತಿಯ ಟ್ರಸ್ಟಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸೇವಾಧಾಮದ ಸಂಚಾಲಕರಾದ ಪುರಂದರ ರಾವ್ ಸ್ವಾಗತಿಸಿದರು, ಸೇವಾಭಾರತಿಯ ಸಿಬ್ಬಂದಿಯಾದ ಚರಣ್ ಕುಮಾರ್ ಎಮ್ ನಿರೂಪಿಸಿದರು, ಸೇವಾಧಾಮದ ಸದಸ್ಯರಾದ ಅವಿನಾಶ್ ಶೆಟ್ಟಿ ಯವರು ಧನ್ಯವಾದ ವಿತ್ತರು. ಹಾಗೂ ಸೇವಾಧಾಮದ ಸಿಬ್ಬಂದಿಗಳು ಮತ್ತು ಸೇವಾಧಾಮದಲ್ಲಿನ ದಿವ್ಯಾoಗರು ಹಾಗೂ ಊರಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.