ಉಜಿರೆಯಲ್ಲಿ ಕರು ಹಾಗೂ ಜಾನುವಾರು ಪ್ರದರ್ಶನ ಮತ್ತು ವಿಚಾರಗೋಷ್ಠಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗೋವುಗಳು ತಾಯಿಗೆ ಸಮಾನ : ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

ಉಜಿರೆ: ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ತಾಲೂಕು, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು, ಗ್ರಾಮ ಪಂಚಾಯತು ಉಜಿರೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜ.13ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಕರು ಹಾಗೂ ಜಾನುವಾರು ಪ್ರದರ್ಶನ ಮತ್ತು ವಿಚಾರಗೋಷ್ಠಿ ನಡೆಯಿತು.


ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡ್ವೆಟ್ನಾಯರು ಕಾರ್ಯಕ್ರಮಕ್ಕೆ ಗೋಪೂಜೆಯೊಂದಿಗೆ ಚಾಲನೆ ನೀಡಿ ಬಳಿಕ ಉದ್ಘಾಟಿಸಿದರು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ, ಗೋವು ತಾಯಿಗೆ ಸಮಾನ. ಹಾಲು ಕೊಡುವ ಹಸುವನ್ನು ಅದರ ಜೀವನ ಪರ್ಯಂತ ರಕ್ಷಿಸಿ ಪೋಶಿಸುವುದು ನಮ್ಮೆಲ್ಲರ ಕರ್ತವ್ಯ. ಅದರಂತೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾನೂನಿನಂತೆ ಗೋಹತ್ಯಾ ನಿಷೇಧ ಪೂರಕವಾಗಿದೆ. ಗೋವುಗಳ ಮೇವಿಗಾಗಿ ಊರಿಗೊಂದು ಗೋಮಾಳವನ್ನು ನಿರ್ಮಿಸಿ ಇವುಗಳ ರಕ್ಷಣೆಗೆ ಸಾರ್ವಜನಿಕರು ಮುಂದಾಗಬೇಕು ಎಂದರು.


ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಜಿ.ಪಂ. ಸದಸ್ಯರುಗಳಾದ ಕೊರಗಪ್ಪ ನಾಯ್ಕ, ಸೌಮ್ಯಲತಾ ಜಯಂತ್ ಗೌಡ, ತಾ.ಪಂ ಸದಸ್ಯರುಗಳಾದ ಕೊರಗಪ್ಪ ಗೌಡ, ಲೀಲಾವತಿ ಧನಲಕ್ಷ್ಮೀ ಜನಾರ್ದನ, ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರುಗಳಾದ ಪದ್ಮನಾಭ ಅರ್ಕಜೆ, ಉಪನಿರ್ದೇಶಕ ಡಾ| ಟಿ.ಜಿ ಪ್ರಸನ್ನ ಕುಮಾರ್, ಡಾ| ಎಸ್.ಡಿ ಸುರೇಶ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ ಮೊದಲಾದವರು ಭಾಗವಹಿಸಿದ್ದರು. ಜಾನುವಾರು ಪ್ರದರ್ಶನಾ ಸಮಿತಿಯ ಅಧ್ಯಕ್ಷ, ಉಜಿರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಗೌಡ ಕೂಡಿಗೆ ಸ್ವಾಗತಿಸಿದರು, ಉಜಿರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ.ಹೆಚ್ ಕಾರ್ಯಕ್ರಮ ನಿರೂಪಿಸಿ, ಆಡಳಿತಾಧಿಕಾರಿ ಡಾ. ಯತೀಶ್ ಕುಮಾರ್ ವಂದಿಸಿದರು.


ಬೆಳಿಗ್ಗೆ ಹೈನುಗಾರಿಕೆಯಲ್ಲಿ ಉತ್ತಮ ತಳಿ ಅಭಿವೃದ್ಧಿ ಮತ್ತು ಕರುಗಳ ಪೋಷಣೆಯ ಬಗ್ಗೆ ಡಾ| ನಿತ್ಯಾನಂದ ಭಕ್ತರಿಂದ, ಆಧುನಿಕ ಮಾದರಿಯಲ್ಲಿ ಲಾಭದಾಯಕ ಹೈನುಗಾರಿಕೆ ಬಗ್ಗೆ ಡಾ| ರವಿಕುಮಾರ್ ರವರಿಂದ ವಿಚಾರಗೋಷ್ಠಿ, ಪ್ರಗತಿಪರ ಹೈನುಗಾರರ ಅನುಭವ ವಿನಿಮಯ ಹಾಗೂ ವಿವಿಧ ತಳಿಯ ಕರು ಮತ್ತು ಜಾನುವಾರುಗಳ ಪ್ರದರ್ಶನ ನಡೆಯಿತು.
ಉತ್ತಮ ತಳಿಯ ಜಾನುವಾರು ಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಉತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಗೌರವಿಸಲಾಯಿತು.


ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಲು ಉತ್ಪಾದಕರ ಸಹಕಾರಿ ಸಂಘ ಉಜಿರೆ, ಬೆಳಾಲು, ಕಲ್ಮಂಜ, ಕನ್ಯಾಡಿ, ಪಡ್ಪು, ನಡ, ಧರ್ಮಸ್ಥಳ, ಚಾರ್ಮಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉಜಿರೆ, ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ, ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರುಗಳು ನಿರ್ದೇಶಕರುಗಳು, ಕಾರ್ಯದರ್ಶಿಗಳು, ತಾಲೂಕು ಸಹಾಯಕ ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕರುಗಳು, ವೈದ್ಯಾಧಿಕಾರಿಗಳು, ಗ್ರಾ.ಪಂ ಸಿಬ್ಬಂದಿ ವರ್ಗದವರು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.