ಉಜಿರೆ ಗ್ರಾ.ಪಂ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆಯಲ್ಲಿ ಶೀಘ್ರದಲ್ಲಿಯೇ ಸುಸಜ್ಜಿತ ಪಾರ್ಕ್ ನಿರ್ಮಾಣವಾಗಲಿದೆ: ಹರೀಶ್ ಪೂಂಜ

ಉಜಿರೆ: ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಉಜಿರೆ ಗ್ರಾಮ ಪಂಚಾಯತ್‌ನಲ್ಲಿ ಶೀಘ್ರದಲ್ಲಿಯೇ ಸುಸಜ್ಜಿತ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ ಮತ್ತು ಉಜಿರೆ ಗ್ರಾಮ ಪಂಚಾಯತ್ ಸಹಕಾರದಲ್ಲಿ ಜ.೧೩ರಂದು ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ತಾಲೂಕಿನಲ್ಲಿರುವ ಸಾರ್ವಜನಿಕ ಕೊಳವೆಬಾವಿಗಳಿಗೆ ಸೋಲಾರ್ ಅಳವಡಿಸುವ ಮೂಲಕ ಉಜಿರೆಯಲ್ಲಿ ಪಂಪ್‌ಗೆ ಸೋಲಾರ್ ಅಳವಡಿಸಿರುವುದು ಸಂತೋಷದ ವಿಚಾರ, ತ್ಯಾಜ್ಯ ವಿಲೇವಾರಿಗಾಗಿ ಸುಂದರ ಘಟಕ ನಿರ್ಮಾಣ ಮಾಡುವ ಮೂಲಕ ಇದರಿಂದ ಸಾವಯವ ಗೊಬ್ಬರ ತಯಾರಿಸಿ ಕೃಷಿಗಳಿಗೆ ಉಪಯೋಗಿಸುವುದರಿಂದ ಸಾರ್ವಜನಿಕರು ಜೊತೆ ಸೇರಿಸಿಕೊಳ್ಳುವಂತಾಗಿದೆ. ಬೆಳೆಯುತ್ತಿರುವ ಅತ್ತಾಜೆಯಲ್ಲಿ ಉತ್ತಮ ಪಾರ್ಕ್, ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುವ ಭರವಸೆ ಇದೆ ಎಂದರು.


ಮುಖ್ಯ ಅತಿಥಿ ಉಜಿರೆ ಕ್ಷೇತ್ರದ ಜಿ.ಪಂ.ಸದಸ್ಯೆ ನಮಿತಾ ಕೆ ಮಾತನಾಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಇಂಜಿನಿಯರ್‌ಗಳ ಸಹಕಾರದಿಂದ ಮತ್ತು ಹೊಂದಾಣಿಕೆಯಿಂದ ಉತ್ತಮ ಕೆಲಸ ಮಾಡಿ ಗ್ರಾಮದ ಅಭಿವೃಧ್ಧಿಗಾಗಿ ರಾಜಕೀಯ ಬಿಟ್ಟು ತೊಡಗಿಸಿಕೊಂಡಾಗ ಮಾದರಿ ಗ್ರಾಮದ ನಿರ್ಮಾಣವಾಗುತ್ತದೆ ಎಂದರು.


ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಕ, ಉಜಿರೆ ಕ್ಷೇತ್ರದ ತಾ.ಪಂ ಸದಸ್ಯ ಶಶಿಧರ ಎಂ ಕಲ್ಮಂಜ, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿ ಕುಸುಮಾಧರ, ಶ್ರೀ ಧ.ಮಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗ್ಡೆ, ರಿ ಪ್ಲಾಸ್ಟಿಕೋ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಡಾ| ಕಿಶೋರ್ ಕುಮಾರ್ ಎಂ.ಜೆ, ಗ್ರಾ.ಪಂ ನೂತನ ಸದಸ್ಯರುಗಳಾದ ರವಿಕುಮಾರ್ ಬರೆಮೇಲು, ಮಹಮ್ಮದ್ ಶರಿಫ್, ಪುಷ್ಪಾ ಆರ್ ಶೆಟ್ಟಿ, ದೇವಕಿ, ಸಂಧ್ಯಾ, ಸಚಿನ್, ಗುರುಪ್ರಸಾದ್ ಕೋಟ್ಯಾನ್, ಜಯರಾಮ ಗೌಡ, ಉಷಾಕಿರಣ್, ನಾಗವೇಣಿ, ಕಮಲಾ, ಲಕ್ಷ್ಮೀ, ಸ್ವಚ್ಛತಾ ಸೇನಾನಿ ರಾಮಚಂದ್ರ ಶೆಟ್ಟಿ, ಭರತ್ ಕುಮಾರ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಧ.ಮಂ ಪತ್ರಿಕೋದ್ಯಮದವರು ತ್ಯಾಜ್ಯ ಘಟಕದ ಬಗ್ಗೆ ನಿರ್ಮಾಣ ಮಾಡಿರುವ ಸಿಡಿಯನ್ನು ಹಾಗೂ ಗ್ರಾಮ ಪಂಚಾಯತ್ ವತಿಯಿಂದ ೨೦೨೧ ರ ಕ್ಯಾಲೆಂಡರನ್ನು ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು.

ಪಂಚಾಯತ್ ಆಡಳಿತಾಧಿಕಾರಿ ಡಾ| ಯತೀಶ್ ಕುಮಾರ್ ಎಂ.ಎಸ್ ಸ್ವಾಗತಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ.ಹೆಚ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಂತ್ ಯು.ಬಿ, ಲೆಕ್ಕ ಸಹಾಯಕ ಮಂಜು ಕೆ.ಜಿ ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು ಸಹಕರಿಸಿದರು

ಲೋಕಾರ್ಪಣೆಗೊಂಡ ಕಾಮಗಾರಿಗಳು
ಉಂಡ್ಯಾಪು ಎಂಬಲ್ಲಿ ಕುಡಿಯುವ ನೀರಿನ ಸ್ಥಾವರ ಹಾಗೂ ಸೌರ ವಿದ್ಯುತ್ ಪಾರ್ಕ್
ಬಸ್ ತಂಗುದಾಣದ ಬಳಿ ನವೀಕೃತ ಸಾರ್ವಜನಿಕ ಶೌಚಾಲಯ,
ಇಜ್ಜಲದಲ್ಲಿ ತ್ಯಾಜ್ಯ ಸಂಪನ್ಮೂಲ ಕೇಂದ್ರದ ಬ್ರ್ಯಾಂಡಿಂಗ್ ಹಾಗೂ ಉಜಿರೆ ಜನ್ಯ ಸಾವಯವ ಗೊಬ್ಬರ ಅನಾವರಣ
ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಹೈನುಗಾರಿಕೆ ಫಲಾನುಭವಿಗಳಿಗೆ ರಬ್ಬರ್ ಮ್ಯಾಟ್ ವಿತರಣೆ
ತ್ಯಾಜ್ಯ ಸಂಪನ್ಮೂಲ ಘಟಕದಲ್ಲಿ ಪ್ಲಾಸ್ಟಿಕ್ ಪುನರ್ ಬಳಕೆಯಿಂದ ಉಪ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಶಿಲಾನ್ಯಾಸ
ಅತ್ತಾಜೆ ಕೆರೆ ಅಭಿವೃದ್ಧಿ ಹಾಗೂ ಜೈವಿಕ ವನಕ್ಕೆ ಚಾಲನೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.