
ಧರ್ಮಸ್ಥಳ: ಕೇಂದ್ರ ಸರಕಾರದ ಆಯುಷ್ ಖಾತೆ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ರವರ ವಾಹನ ಅಪಘಾತವಾದ ಮತ್ತು ಅವರ ಪತ್ನಿ ನಿಧನರಾದ ವಿಷಯ ಕೇಳಿ ವಿಷಾದವಾಯಿತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
“ಸಾತ್ವಿಕ ಹಾಗೂ ದೈವಭಕ್ತರಾಗಿದ್ದ ಶ್ರೀಪಾದ್ ಯೆಸ್ಸೋ ನಾಯಕ್ರವರು ಸ್ನೇಹಜೀವಿ. ಕೊಂಚವೂ ಅಹಂಕಾರ, ಆಡಂಬರಗಳಿಲ್ಲದೆ ಹಸನ್ಮುಖಿಯಾಗಿ ಸದಾ ಚಟುವಟಿಕೆಯಿಂದ ಇರುವವರು. ಆಯುಷ್ ಇಲಾಖೆಯ ಮೂಲಕ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗಗಳಿಗೆ ಸರ್ವರೀತಿಯ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ.

ಅವರ ಶ್ರೀಮತಿಯವರು ಉತ್ತಮ ಗೃಹಿಣಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಶ್ರೀಮತಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ರವರು ಶೀಘ್ರ ಚೇತರಿಸಿಕೊಳ್ಳಲಿ ಮತ್ತು ಚಟುವಟಿಕೆಯಿಂದ ದೇಶ ಸೇವೆ ಮಾಡುವಂತಾಗಲಿ ಎಂದು ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸುತ್ತೇನೆ”ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.