ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ದೇವರಗುಡಿಗಳಿಗೆ ಭಕ್ತಾದಿಗಳಿಂದ ರಜತ ಆಚ್ಛಾದಿಸಿ  ದ್ವಾರ ಸಮರ್ಪಣೆ

ಉಜಿರೆ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ದೇವರಗುಡಿಗಳಿಗೆ ಭಕ್ತಾದಿಗಳಿಂದ ರಜತ ಆಚ್ಛಾದಿಸಿ  ದ್ವಾರ ಸಮರ್ಪಣೆಯ  ವಿಶೇಷ  ಕಾರ್ಯಕ್ರಮ  ಜರುಗಿತು.  ಭಕ್ತಾಧಿಗಳಾದ  ಉಜಿರೆಯ  ಮಹಾಲಕ್ಷ್ಮೀ ಸ್ಟೋರ್ಸ್ ನ   ಭರತ್ ಕುಮಾರ್ ,   ಇಂಜಿನಿಯರ್   ಗಣೇಶ್  ಮತ್ತು  ಉಜಿರೆಯ ಕಾಮಧೇನು ಹೋಟೆಲ್ ನ   ಸತೀಶ ಹೊಳ್ಳ ಸಹೋದರರು  ಶ್ರೀ  ಜನಾರ್ದನ ಸ್ವಾಮಿ  ದೇವರ ಗರ್ಭಗುಡಿಯ  ಮಹಾದ್ವಾರಕ್ಕೆ ಕಲಾತ್ಮಕ ಕೆತ್ತನೆಯ ರಜತ ಹೊದಿಕೆಯನ್ನು ಆಚ್ಛಾದಿಸಿ  ಶ್ರೀ ದೇವರಿಗೆ  ಸಮರ್ಪಿಸಿದರು.
ಉಜಿರೆಯ  ಉದ್ಯಮಿ  ರವಿ ಚೆಕ್ಕಿತ್ತಾಯರು  ಶ್ರೀ  ಈಶ್ವರ  ದೇವರ ಗುಡಿಗೆ ಮತ್ತು  ಉಜಿರೆ ಇಂಡಿಯನ್ ಅರ್ಥ್ ಮೂವರ್ಸ್ ನ   ರಾಘವೇಂದ್ರ  ಬೈಪಾಡಿತ್ತಾಯ ರು ಶ್ರೀ  ಅಮ್ಮನವರ ಗುಡಿಗೆ   ಉತ್ತಮ  ಕುಸುರಿ  ಕೆಲಸದಿಂದ   ಶೋಭಿಸುವ ಹಿತ್ತಾಳೆ (ಪೀತಳಕಂ )ಯ ಹೊದಿಕೆಯನ್ನು ಆಚ್ಛಾದಿಸಿ  ಸಮರ್ಪಿಸಿದರು.
ದೇವಸ್ಥಾನದ ಗುಡಿಗಳುವಿಶೇಷ  ಮೆರುಗು ಮತ್ತು ಶೋಭೆಯಿಂದ  ಕಂಗೊಳಿಸುವಂತೆ ಸಹಕರಿಸಿದ ಭಕ್ತರಿಗೆ   ಶ್ರೀ ದೇವ ರಲ್ಲಿ  ಆಡಳಿತ ಮೊಕ್ತೇಸರ ವಿಜಯ ರಾಘವ ಪಡುವೆಟ್ನಾಯ ರ ನೇತೃತ್ವದಲ್ಲಿ ಪ್ರಾರ್ಥಿಸಿ ,ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು .  ಈ ಸಂದರ್ಭದಲ್ಲಿ  ಶರತ್ ಕೃಷ್ಣ ಪಡುವೆಟ್ನಾಯ ,ರಾಘವೇಂದ್ರ ಬೈಪಾಡಿತ್ತಾಯ ,ಕುಟುಂಬಸ್ಥರು ,ರವಿ ಚಕ್ಕಿತ್ತಾಯ ಮತ್ತು ಮನೆಯವರು , ಸತೀಶ್  ಹೊಳ್ಳ ಸಹೋದರರು ಮತ್ತು ಮನೆಯವರು ,ಭರತ್ ಕುಮಾರ್ ಮತ್ತು ಮನೆಯವರು  ಹಾಗು ಗಣೇಶ್ ಮತ್ತು ಮನೆಯವರು  ಭಾಗವಹಿಸಿದ್ದರು.
ಅರ್ಚಕ  ವೇದಮೂರ್ತಿ ಶ್ರೀನಿವಾಸ ಹೊಳ್ಳ ಮತ್ತು  ,ರಾಮಚಂದ್ರ ಹೊಳ್ಳರು ದೇವರಿಗೆ ಪೂಜಾ ಕಾರ್ಯ ನೆರವೇರಿಸಿ ಸೇವಾರ್ಥಿಗಳಿಗೆ ಪ್ರಸಾದ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.