ಬೆಳ್ತಂಗಡಿ: ಕೃಷಿ ಯಾಂತ್ರಿಕರಣ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ. 50 ಗರಿಷ್ಟ ರೂ.72500/- ಸಹಾಯಧನದಲ್ಲಿ ಎರಡು ರೈತರಿಗೆ ಟ್ರ್ಯಾಕ್ಟರ್ ವಿತರಣೆ ಜ.12 ರಂದು ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ಶಾಸಕ ಹರೀಶ್ ಪೂಂಜ ವಿತರಿಸಿದರು.
ಪಟ್ರಮೆ ಗಾಮದ ಉಳಿಯಬೀಡು ದೇವಪಾಲ ಅಜ್ರಿ ಯವರ ಪತ್ನಿ ದೇವ ಕುಮಾರಿ ಹಾಗೂ ಮಿತ್ತಬಾಗಿಲು ಗ್ರಾಮದ ತುಂಗಪ್ಪ ಪೂಜಾರಿಯವರಿಗೆ ತಲಾ ರೂ.1 ಲಕ್ಷ 70 ಸಾವಿರ ಮೌಲ್ಯದ ಟ್ರ್ಯಾಕ್ಟರನ್ನು ರೂ.72500/- ಸಹಾಯಧನದಲ್ಲಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾ.ಪಂ ಸದಸ್ಯ ಸುಧಾಕರ, ಪಟ್ರಮೆಯಿಂದ ಯಂತ್ರ ಪಡೆದುಕೊಂಡಿರುವ ರೈತ ತಂಡದವರಾದ ದೇವಪಾಲ ಅಜ್ರಿ, ಮನೋಜ್, ಶೀನಪ್ಪ, ಚೆನನಿ, ಲಕ್ಷ್ಮಣ ಗೌಡ, ಕೇಶವ ಗೌಡ, ಸೂರಪ್ಪ, ಆನಂದ, ಕೃಷಿ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಹೆಚ್.ಡಿ ಸ್ವಾಗತಿಸಿದರು. ಕೊಕ್ಕಡ ಹೋಬಳಿ ಸಹಾಯಕ ಕೃಷಿ ಅಧಿಕಾರಿ ಚಿದಾನಂದ ಎಸ್.ಹೂಗಾರ್ ವಂದಿಸಿದರು.