ನಾಳ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ ಪ್ರಯುಕ್ತ ಪೂರ್ವಭಾವಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಪು: ಇಲ್ಲಿಯ ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಇತ್ತೀಚೆಗೆ ಅನ್ನಪೂರ್ಣ ಛತ್ರದ ಸಭಾಂಗಣದಲ್ಲಿ ಜರಗಿತು. ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ. ಅಧ್ಯಕ್ಷತೆ ವಹಿಸಿದ್ದರು. ಹಾಗೂ ಜಾತ್ರಾ ಮಹೋತ್ಸವ ಸರಳವಾಗಿ ನಡೆಸಲು ಭಕ್ತಾಧಿಗಳ ಸಹಕಾರವನ್ನುಯಾಚಿಸಿದರು. ವಾರ್ಷಿಕವಾಗಿ ನಡೆಯುವ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರುವ ಬಗ್ಗೆ ಉತ್ತಮ ರೀತಿಯಲ್ಲಿ ಚರ್ಚೆ ನಡೆಯಿತು. ವೈದಿಕ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸುವ ಮೂಲಕ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ವಿವಿಧ ಸಮಿತಿ ಪದಾಧಿಕಾರಿಗಳ ಅಯ್ಕೆ ಸರ್ವಾನುಮತದಿಂದ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೆ|ಮೂ| ರಾಘವೇಂದ್ರ ಅಸ್ರಣ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ, ದಿನೇಶ ಗೌಡ ಕಲಾಯಿತೋಟ್ಟು, ಅಂಬಾ ಆಳ್ವ ನಾಳ, ವಿಜಯ ಹೆಚ್. ಪ್ರಸಾದ್ ಕಂಠಿನಿ, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ, ಭಜನ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ದೇವಸ್ಥಾನ ಪ್ರಬಂಧಕ ಗಿರೀಶ್ ಶೆಟ್ಟಿ ಗೇರುಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ವಸಂತ ಮಜಲು, ಉದ್ಯಮಿ ಸುರೇಶ್ ಶೆಟ್ಟಿ ಆರ್.ಎನ್.ಕಳಿಯ ಪಂ.ಮಾಜಿ ಅಧ್ಯಕ್ಷರಾದ ತುಕರಾಮ ಪೂಜಾರಿ, ಕೇಶವ ಪೂಜಾರಿ ನಾಳ, ಮಾಜಿ ಉಪಾಧ್ಯಕ್ಷ ಸತೀಶ್ ನಾಕ್ ನಾಳ, ಉಪನ್ಯಾಸಕ ಕೇಶವ ಬಂಗೇರ ಗೇರುಕಟ್ಟೆ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆರ್ಬುಡ, ಕಳಿಯ ಸಿಎ ಬ್ಯಾಂಕ್ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಹರಿ ಪ್ರಸಾದ್ ಕೆ.ಎಸ್, ನಿರ್ದೇಶಕ ಶೇಖರ್ ನಾಯ್ಕ, ಸ್ಥಳೀಯರಾದ ಸದಾಶಿವ ನಾಕ್, ಪೂವಪ್ಪ ಶೆಟ್ಟಿ, ಪುರಂದರ ಶೆಟ್ಟಿ, ಬಾಲಕೃಷ್ಣ ಗೌಡ ಬಿರ್ಮೋಟ್ಟು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕುಳಾಯಿ, ರಾಘವ ಪೂಜಾರಿ ಮತ್ತು ಭಜನಾ ಮಂಡಳಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.