ಪಾಂಗಾಳ ಶ್ರೀ ಚಾಮುಂಡೇಶ್ವರಿ ಪರಿವಾರ ದೈವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೈವದ ಪ್ರತಿಷ್ಠೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ತುಳುನಾಡಿನಲ್ಲಿ ದೈವಾರಾಧನೆ , ನಾಗಾರಾಧನೆಯು ವಿಶೇಷವಾದ ಸಂಪ್ರದಾಯವಾಗಿದೆ. ನಮ್ಮ ಇಷ್ಟಾರ್ತಗಳನ್ನು ಶೀಘ್ರವಾಗಿ ನೆರವೇರಿಸಿ ಕೊಡುವ ದೈವಗಳ ಮೇಲೆ ಅಪಾರವಾದ ಭಕ್ತಿ ನಂಬಿಕೆ. ಹಾಗಾಗಿ ನಾಡಿನಾದ್ಯಂತ ಅನೇಕ ದೈವಸ್ಥಾನಗಳು ಭಕ್ತ ಜನರ ಶ್ರದ್ಧಾಕೇಂದ್ರವಾಗಿ ತಲೆ ಎತ್ತುತ್ತಿದೆ.
ಧರ್ಮಸ್ಥಳ ಗ್ರಾಮದ ಪಾಂಗಳ ಬಾಬು ಗೌಡ ಮತ್ತು ಮಕ್ಕಳು ಸೇರಿ ನೂತನವಾಗಿ ನಿರ್ಮಿಸಿದ ಶಿಲಾಮಯ ದೈವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮವು ಜ. 6ರಿಂದ 12ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಜ. 6ರಂದು ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಹರೀಶ್ ಆರಿಕೋಡಿ ಯವರು ಪಾಂಗಳ ಶ್ರೀ ಚಾಮುಂಡೇಶ್ವರಿ ಮಹಿಳಾ ಭಜನಾ ಮಂಡಳಿ ಉದ್ಘಾಟಿಸಿದರು. ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಜಿ. ಸೋಮೆಗೌಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾಮದಪದವು ಉಮೇಶ್ ಕೋಟ್ಯಾನ್ ರವರು ರಚಿಸಿದ ಪಾಂಗಳ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಭಕ್ತಿ ಪ್ರಧಾನ ಹಾಡಿನ “ಚಾಮುಂಡೇಶ್ವರಿ ಭಕ್ತಿ ಸುಗಿಪು” ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು.


ಜ.7ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಕುಂಭ ಲಗ್ನದಲ್ಲಿ ನಾಗದೇವರ ಬಿಂಬಪ್ರತಿಷ್ಠೆ ಕಲಶಾಭಿಷೇಕ, ಅಶ್ಲೇಷ ಬಲಿ, ಪ್ರಧಾನ ಹೋಮ, ತಂಬಿಲ ಸೇವೆ, ಕಲ್ಪೋಕ್ತ ಪ್ರಸನ್ನ ಪೂಜೆ, ವಟು ಆರಾಧನೆ, ಸಂಜೆ 5.30ರಿಂದ ಶ್ರೀ ಚಾಮುಂಡೇಶ್ವರಿ ದೈವ ಸನ್ನಿಧಿಯಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ಗೋಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿಗಳು, ಪ್ರಾಕಾರ ಬಲಿ, 108 ಕಲಶಾಧಿವಾಸ, ರಾತ್ರಿ ಭಜನೆ ನಡೆಯಿತು.
ಜ.8ರಂದು ಬೆಳಿಗ್ಗೆ ದ್ವಾದಶ ನಾಳಿಕೇರ ಗಣಯಾಗ, ಕಲಶ ಪೂಜೆ, ಕಲಸ ಪ್ರಧಾನ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ವನದುರ್ಗಾ ಹೋಮ, ಕುಂಭ ಲಗ್ನದಲ್ಲಿ ಶ್ರೀ ಚಾಮುಂಡೇಶ್ವರಿ ಪ್ರತಿಷ್ಠೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ನಂತರ ಭಜನೆ, ರಾತ್ರಿ ಯಕ್ಷ ವೈಭವ ಸ್ಥಳೀಯರಿಂದ ರಾತ್ರಿ ಭಗವತೀ ಕ್ಷೇತ್ರ ಯಕ್ಷಗಾನ ಪ್ರದರ್ಶನ, ಜ.10ರಂದುಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಚಂಡಿಕಾಯಾಗ, ಭಜನೆ, ರಾತ್ರಿ ಭಂಡಾರ ಇಳಿದು ಶ್ರೀ ಚಾಮುಂಡೇಶ್ವರಿ ಪರಿವಾರ ದೈವಗಳ ನೇಮೋತ್ಸವ ಜರಗಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ರವಿ ಕುಮಾರ್ ಭಟ್ ಪಜಿರಡ್ಕ, ಶಿಲ್ಪಿ ಬೆಳಾಲು ಶಶಿಧರ ಆಚಾರ್ಯ (ಮರದ ಕೆತ್ತನೆ ಕೆಲಸಕ್ಕಾಗಿ), ಪಾಂಗಾಳ ಮನೆಯಲ್ಲಿ 25 ವರ್ಷಗಳಿಂದ ಕೃಷಿ ಕೆಲಸದ ಸೇವೆಗೈದ ವಿಶ್ವನಾಥ ಪೂಜಾರಿ ಮಧ್ಪು ಹಾಗೂ “ಶ್ರೀ ಚಾಮುಂಡೇಶ್ವರಿ ಭಕ್ತಿ ಸುಗಿಪು” ಧ್ವನಿ ಸುರುಳಿ ರಚಿಸಿದ ವಾಮದಪದವು ಉಮೇಶ್ ಕೋಟ್ಯಾನ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.