ಇಳಂತಿಲದ ಅಂಡೆತ್ತಡ್ಕ ಶಾಲೆಯಲ್ಲಿ 10ನೇ ವರ್ಷದ ಕನ್ನಡ ಹಬ್ಬ

ಇಳಂತಿಲ: ಕನ್ನಡ ಬಳಗ ಇಳಂತಿಲ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ೧೦ನೇ ವರ್ಷದ ಕನ್ನಡ ಹಬ್ಬ ಕಾರ್ಯಕ್ರಮ ಅಂಡೆತ್ತಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ  ಜರುಗಿತು.
ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಉದ್ಘಾಟಿಸಿ ಮಾತನಾಡಿದರು. ಇಳಂತಿಲ ಕನ್ನಡ ಬಳಗದ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಉದಯೋನ್ಮುಖ ಸಾಹಿತಿ ಅಶ್ವಿನಿ ಕೋಡಿಬೈಲು ಕವಿ ನುಡಿಗಳನ್ನಾಡಿದರು. ಇತ್ತೀಚೆಗೆ ನಿಧನರಾದ ಇಳಂತಿಲದ ಧುರೀಣರಾದ ವಿಠಲ ಭಟ್ ಹಾಗೂ ಸೀತಾರಾಮ ಭಟ್ಟ ಇವರ ಸಂಸ್ಮರಣೆಯನ್ನು ಸದಾಶಿವ ಭಟ್ ನಡೆಸಿಕೊಟ್ಟರು.
ಕನ್ನಡ ಹಬ್ಬದ ಪ್ರಯುಕ್ತ ತಾಲೂಕಿನ ವಿದ್ಯಾರ್ಥಿಗಳಿಗಾಗಿ ನಡೆಸಿದ ಕಥೆ, ಕವನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಸವಿ ನೆನಪಿನಲ್ಲಿ ಆಗಮಿಸಿದ ಎಲ್ಲರಿಗೂ ಉಚಿತ ಪುಸ್ತಕ ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಅಣ್ಣಪ್ಪ ನಾಯ್ಕ ಎಂ ಸ್ವಾಗತಿಸಿ, ಕನ್ನಡ ಬಳಗದ ಸದಸ್ಯ ತಿರುಮಲೇಶ್ವರ ಭಟ್ ವಂದಿಸಿ, ಕಾರ್ಯದರ್ಶಿ ರಾಘು ಕಾರ್ಯಕ್ರಮ ನಿರೂಪಿಸಿದರು. ಅಂಡೆತಡ್ಕ ಶಾಲಾ ಶಿಕ್ಷಕರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.