ದೇಶ ವಿರೋಧಿ ಘೋಷಣೆ ಕೂಗಿದವರಿಗೂ ಮುಸ್ಲಿಂ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ : ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪತ್ರಿಕಾಗೋಷ್ಠಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇತ್ತೀಚೆಗೆ ಉಜಿರೆ ಶ್ರೀ ಧ.ಮಂ.ಕಾಲೇಜು ಮುಂಭಾಗ ಮತ ಎಣಿಕೆ ಕೇಂದ್ರದ ಎದುರು 2 ರಾಜಕೀಯ ಪಕ್ಷಗಳ ವಿಜಯೋತ್ಸವದ ಸಂದರ್ಭದಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವವರಿಗೂ ಮುಸ್ಲಿಂ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿ.ಪಂ ಸದಸ್ಯ ಸಾಹುಲ್ ಹಮೀದ್ ಕೆ.ಕೆ ಹೇಳಿದರು.
ಅವರು ಜ.9ರಂದು ಅಂಬೇಡ್ಕರ್ ಭವನದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಪದಾಧಿಕಾರಿಗಳ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಜನತೆ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದು, ಇಲ್ಲಿನ ಜನರ ಶಾಂತಿಭಂಗ ತರುವ ಪ್ರಕರಣಗಳು ನಿರಂತರವಾಗಿ ಕೆಲವೊಂದು ಕೋಮು ಪ್ರಚೋದಿತ ಸಂಘಟನೆಗಳಿಂದ ನಡೆಯುತ್ತಿದೆ. ಜನರ ನೆಮ್ಮದಿಗೆ ಕೊಳ್ಳಿ ಇಟ್ಟು ರಾಜಕೀಯ ಲಾಭ ಪಡೆಯುವ ಷಡ್ಯಂತ್ರವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕ ಖಂಡಿಸುತ್ತದೆ.
ಉಜಿರೆ ಘಟನೆ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದಂತಹ ವಿದ್ಯಾಮಾನವಾಗಿದ್ದು, ಅದನ್ನು ಯಾರೇ ಮಾಡಿರಲಿ ಅದು ಖಂಡನಾರ್ಹವಾಗಿದೆ. ಈ ಘಟನೆಯಿಂದ ರಾಜಕೀಯ ಲಾಭ ಪಡೆಯಲು ಎಸ್‌ಡಿಪಿಐ ಮತ್ತು ಬಿಜೆಪಿ ಪಕ್ಷದ ಕೆಲವು ನಾಯಕರುಗಳು ಪ್ರಯತ್ನಪಡುತ್ತಿದ್ದು, ಇದನ್ನು ಕೂಡಾ ಬಲವಾಗಿ ಖಂಡಿಸುತ್ತದೆ. ಶತ್ರುದೇಶದ ಪರವಾಗಿ ಯಾರೇ ಘೋಷಣೆ ಕೂಗಿದ್ದರೂ, ಎಷ್ಟೇ ಪ್ರಭಾವಿಗಳಾದರೂ, ಯಾವುದೇ ಪಕ್ಷದವರಾಗಿದ್ದರೂ ಅವರ ಮೇಲೆ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಹಮೀದ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಬಿ ಅಶ್ರಫ್ ನೆರಿಯ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಡಿ.ಕೆ ಅಯ್ಯುಬ್, ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹಾಜಿ ಹಸನಬ್ಬ ಚಾರ್ಮಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎ ನಝೀರ್, ಯು.ಎ ಹಮೀದ್ ಉಜಿರೆ, ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆ. ಸಲೀಂ, ಖಾಲೀದ್ ಪುಲಾಬೆ, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ನಿವೃತ್ತ ಸೈನಿಕ ಆಲಿಯಬ್ಬ ಪುಲಾಬೆ, ನ.ಪಂ ಸದಸ್ಯೆ ಮುಸ್ತಾರ್‌ಜಾನ್, ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಜಿರಾ, ಘಟಕದ ಮಾಜಿ ಅಧ್ಯಕ್ಷ ಮೆಹಬೂಬ್ ಬೆಳ್ತಂಗಡಿ, ಖಾಲಿದ್ ಕ್ಕಕೇನ, ಮಹಮ್ಮದಾಲಿ ಕಕ್ಕೇನ, ಮಹಮ್ಮದ್ ನಝೀರ್ ಶಕ್ತಿನಗರ, ತೆಕ್ಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ಅಬ್ದುಲ್ ರಝಾಕ್, ಇಲಿಯಾಸ್ ಅಹಮ್ಮದ್ ಕಕ್ಕಿಂಜೆ, ಅಬ್ದುಲ್ ಕರೀಂ ಗೇರುಕಟ್ಟೆ, ಇಲ್ಯಾಸ್ ಉಜಿರೆ, ಅಬ್ದುಲ್ ಹಕೀಂ ಕೊಕ್ಕಡ, ಸುಲೈಮಾನ್ ಟಿ.ಕೆ, ಮಲವಂತಿಗೆ ಗ್ರಾ.ಪಂ ಸದಸ್ಯ ಕೆ.ಯು ಮಹಮ್ಮದ್, ಇಸ್ಮಾಯಿಲ್ ಪೆರಿಂಜೆ, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಮಾಜಿ ಸೈನಿಕ ಮಹಮ್ಮದ್ ರಫೀಕ್ ಜಿ.ಕೆರೆ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.