ಅರಸಿನಮಕ್ಕಿ: ತುಂಬೆತ್ತಡ್ಕ ಕಾಳಭೈರವ ಸ್ವಾಮಿ ಮತ್ತು ಶ್ರೀಮಾರಿ ಅಮ್ಮನವರು ಹಾಗೂ ರಾಹು ಬಂಟ ದೈವದ ಪುನರ್ಪ್ರತಿಷ್ಠಾ ಮಹೋತ್ಸವವು ಜ.7 ಹಾಗೂ 8 ರಂದು ಜರುಗಿತು.
ಜ.8 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ಧಾರ್ಮಿಕ ಸಭೆ ಜರುಗಿತು. ಸಭಾ ಕಾರ್ಯಕ್ರಮವನ್ನು ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ವಿ.ಹಿಂಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಧಾರ್ಮಿಕ ಪ್ರವಚನ ನೀಡಿದರು.
ವೇದಿಕೆಯಲ್ಲಿ ಅರಸಿನಮಕ್ಕಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಧರ್ಮರಾಜ ಗೌಡ ಅಡ್ಕಾಡಿ, ಮಂಗಳೂರಯ ಎಲ್ಐಸಿ ಆಫ್ ಇಂಡಿಯಾ ಮ್ಯಾನೇಜರ್ ನಾರಾಯಣ ಟಿ, ಕೊಕ್ಕಡ ಪಂಚಮಿ ಹಿತಾಯುರ್ಧಾಮದ ಡಾ ಮೋಹನದಾಸ್ ಗೌಡ, ಮಂಗಳೂರಿನ ಬಿಎಸ್ಎನ್ಎಲ್ ಕಛೇರಿಯ ಸೂಪರಿಂಡೆಂಟ್ ಎಂ.ಆರ್ ಸುಮತಿ, ಗ್ರಾ.ಪಂ ಸದಸ್ಯರಾದ ಪ್ರೇಮಚಂದ್ರ, ಸುಧೀರ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಮತಾ, ಎಂ.ಆರ್ ಸುನಂದಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ ಚಂದ್ರಶೇಖರ ಉಪಸ್ಥಿತರಿದ್ದರು.