ನಾರಾವಿ: ಕೊರೊನಾ ಮಹಾಮಾರಿ ಜಗತ್ತಿಗೆ ಅಪ್ಪಲಿಸಿದ್ದರಿಂದ ಜನಜೀವನ ಅಸ್ಥವ್ಯಸ್ಥವಾಗಿದ್ದು ಇದೀಗ ಸುಧಾರಣೆಯತ್ತಾ ಹೆಜ್ಜೆಯಿಡುತ್ತಿದ್ದೇವೆ ಕೊರೊನಾ ರೋಗಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಪೂರ್ವಸಿದ್ದತೆ ಕೈಗೊಳ್ಳಲು ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಧಿಕಾರಿ ಕಛೇರಿ ಬೆಳ್ತಂಗಡಿ, ಪ್ರಾ, ಆರೋಗ್ಯ ಕೇಂದ್ರ ನಾರಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ 19 ಲಸಿಕಾಕರಣ ಬಗ್ಗೆ ಅಣುಕು ಪ್ರದರ್ಶನವು ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಪ್ರತಿ ಹಂತದಲ್ಲಿಯೂ ಕೊರೊನಾ ಲಸಿಕೆ ನೀಡುವ ವೇಳೆ ರೋಗಿಯ ಮಧುಮೇಹ, ಸಕ್ಕರೆ ಖಾಯಿಲೆ, ಸೇರಿದಂತೆ ಬೇರೆ ಯಾವುದಾದರೂ ರೋಗವಿದೆಯೋ ಎಂಬ ಮಾಹಿತಿ ಪಡೆಯಲಾಗುತ್ತದೆ. ಕೊರೊನಾ ಲಸಿಕೆ ಪೂರೈಕೆಗೂ ಮುನ್ನ ಪೂರ್ವ ಸಿದ್ಧತೆ ಕೈಗೊಳ್ಳಲು ಮತ್ತು ಯಾವುದೇ ಸಮಸ್ಯೆಯಾದರೇ ಅದನ್ನು ಸರಿಪಡಿಸಲು ಡ್ರೈರನ್ ಸಹಕಾರಿಯಾಗಲಿದೆ ಎಂದು ವೈದ್ಯರು ತಿಳಿಸಿದರು.
ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸ್ಟಾಪ್ ನರ್ಸ್ಗಳಿಗೆ ಲಸಿಕೆ
ಮೊದಲನೆದಾಗಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸ್ಟಾಪ್ ನರ್ಸ್ಗಳಿಗೆ ಲಸಿಕೆ ಹಾಕಲಾಗುತ್ತದೆ, ಯಾಕೆಂದರೆ ಜನ ಸಾಮಾನ್ಯರಿಗೆ ಯಾವುದೇ ಗೊಂದಲಬೇಡ ಎಂಬ ನಿಟ್ಟಿನಲ್ಲಿ ಮೊದಲು ಇವರುಗಳಿಗೆ ಲಸಿಕೆ ಹಾಕಲಾಗುವುದು. ಇಗಾಗಲೇ ನಾರಾವಿ ಕೇಂದ್ರದಲ್ಲಿ 23 ಮಂದಿ ನೊಂದವಣೆ ಮಾಡಿದ್ದಾರೆ.
ಕೊರೊನಾ ಲಸಿಕೆ ಬಗ್ಗೆ ಜನರಿಗೆ ಅನುಮಾನ, ಹೆದರಿಕೆ ಬೇಡ,
ಲಸಿಕೆ ಹಾಕಿಕೊಳ್ಳಲು ಮೊದಲು ನೊಂದವಣೆ ಮಾಡಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವರು ನಿಗದಿತ ಕೊಠಡಿಗೆ ಪ್ರವೇಶ ಮಾಡಿ ನಂತರ, ಲಸಿಕಾ ಸಿಬ್ಬಂದಿಗಳಿಂದ ಮಾಹಿತಿ ಪಡೆದು, ನಂತರ ಲಸಿಕೆ ಹಾಕಿಸಿಕೊಳ್ಳುವುದು, ನಂತರ ಯಾವುದೇ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಅರ್ಧ ಗಂಟೆ ವಿಶ್ರಾಂತಿ ನೀಡಿ ಮನೆಗೆ ಕಳುಹಿಸಿಕೊಡಲಾಗುವುದು, ಇದರ ಪ್ರಾತಿಕ್ಷತೆ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯಧಿಕಾರಿ ಡಾ| ಕಲಾಮಧು, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರತ್ನಾಕರ್, ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚೈತ್ರ, ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ದಿಕ್ಷಿತಾ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕಾವ್ಯ ಹಾಗೂ ಆಶಾಕಾರ್ಯಕತೆಯರು, ಹಿರಿಯ -ಕಿರಿಯ ಆರೋಗ್ಯ ಸಹಾಯಕರು ಉಪಸ್ಥಿತರಿದ್ದರು.