ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಮಡಂತ್ಯಾರು : ಇಲ್ಲಿಯ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಜ. 27 ರಂದು ಜರುಗಲಿದ್ದು, ಇದರ ಅಂಗವಾಗಿ ಜ.8ರಂದು ನಡೆದ ಪೂರ್ವಾಭಾವಿ ಸಭೆಯಲ್ಲಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದ ತಂತ್ರಿವರೇಣ್ಯರಾದ ಗುರುರಾಜ ತಂತ್ರಿ ಮತ್ತು ಮಧುಸೂದನ ತಂತ್ರಿಗಳು ಬಿಡುಗಡೆಗೊಳಿಸಿದರು.


ಕ್ಷೇತ್ರದ ಪ್ರಧಾನ ಅರ್ಚಕ ಪೇಜಾವರ ಟಿ.ವಿ. ಶ್ರೀಧರ ರಾವ್, ಆಡಳಿತಾಧಿಕಾರಿ ಲಿಂಗರಾಜ ಪೂಜಾರ, ಯೋಗೀಶ ಹೆಗ್ಡೆ, ಮತ್ತು ದೇವಳದ ಮಾಜಿ ಮೊಕ್ತೇಸರರುಗಳಾದ ವಿಠಲ ಶೆಟ್ಟಿ ಮೂಡಾಯೂರು, ರತ್ನಾಕರ ಶೆಟ್ಟಿ, ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ಗ್ರಾಮದ ಹಿರಿಯರು, ಭಕ್ತಾಧಿಗಳು ಉಪಸ್ಥಿತರಿದ್ದರು.


ಶ್ರೀ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದಂದು ವಿಶೇಷವಾಗಿ ಚಂಡಿಕಾ ಯಾಗ, ದೇವರ ಬಲಿ, ದೈವಗಳ ನರ್ತನ ಸೇವೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಊರ-ಪರವೂರ ಭಕ್ತಾಭಿಮಾನಿಗಳ ವಿಶೇಷ ಸಹಕಾರವನ್ನು ಈ ಸಂದರ್ಭದಲ್ಲಿ ಕೋರಲಾಯಿತು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.