ಪಟ್ರಮೆ: ಇಲ್ಲಿಯ ಅನಾರು ಮಾತ್ರಡ್ಕ ನಿವಾಸಿ ಶ್ರೀಮತಿ ಬಾಲಕ್ಕ ವೀರಪ್ಪ ರವರ ಮನೆಗೆ ಜ.7 ರಂದು ತಡರಾತ್ರಿ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ.
ಘಟನೆಯ ವಿವರ: ಶ್ರೀಮತಿ ಬಾಲಕ್ಕ ರವರು ತಮ್ಮ ಪುತ್ರ ಭರತೇಶ್ ಹಾಗೂ ಸಂಬಂಧಿ ಸೀಮಾರೊಂದಿಗೆ ಜ.7 ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಅವರ ಮನೆಗೆ ತಡರಾತ್ರಿ ಸಿಡಿಲು ಬಡಿದಿದೆ. ಸಿಡಿಲಿನ ಪ್ರಭಾವಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣವಾಗಿ ಸುಟ್ಟು ಹೋಗಿದೆ ಹಾಗೂ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ.
ಮನೆಯವರು ಇಂದು(ಜ.8) ಮಧ್ಯ್ಯಾಹ್ನ ಮನೆಗೆ ಮರಳಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 7 ವರ್ಷಗಳ ಹಿಂದೆ ಬಾಲಕ್ಕರವರ ಪತಿ ವೀರಪ್ಪ ರವರು ಸಿಡಿಲು ಬಡಿದು ಸಾವನ್ನಪ್ಪಿದ್ದರು. ಅಲ್ಲದೆ ಕಳೆದ ವರ್ಷ ಕೂಡ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಇದೇ ಮನೆಗೆ ಸಿಡಿಲು ಬಡಿದಿತ್ತು.
ಘಟನಾ ಸ್ಥಳಕ್ಕೆ ಪಟ್ರಮೆ ಗ್ರಾ.ಪಂ ಸದಸ್ಯ ಮನೋಜ್ ರವರು ಭೇಟಿ ನೀಡಿ ಅಗತ್ಯ ಕೆಲಸ ಕಾರ್ಯಗಳಿಗೆ ಸಹಕರಿಸಿದರು.
