ಕನ್ಯಾಡಿಯಲ್ಲಿ ಶ್ರೀ ಗಣೇಶ್ ರೆಸಿಡೆನ್ಸಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಧರ್ಮಸ್ಥಳ: ಇಲ್ಲಿಯ ಕನ್ಯಾಡಿ II ನಲ್ಲಿ ನೂತನವಾಗಿ ಶ್ರೀ ಗಣೇಶ್ ರೆಸಿಡೆನ್ಸಿ ಜ.8 ರಂದು ಶುಭಾರಂಭಗೊಂಡಿತು. ಶ್ರೀ ರಾಮ ಕ್ಷೇತ್ರದ ಮಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ  ಹಾಗೂ ದ.ಕ.ಜಿಲ್ಲಾ ಸಂಸದ  ನಳಿನ್ ಕುಮಾರ್ ಕಟೀಲು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.  ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ  ಕೆ ಪ್ರತಾಪ್‌ಸಿಂಹ ನಾಯಕ್, ವಿಟ್ಲ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ ಅಧಿಕಾರಿ,  ಶ್ರೀ ಗುರುದೇವ ಮಠದ ಟ್ರಸ್ಟಿ ಚಿತ್ತರಂಜನ್ ಗರೋಡಿ, ಮಾಜಿ ಶಾಸಕ ಕೆ ವಸಂತ ಬಂಗೇರ, ಉಜಿರೆ ಭಾರತ್ ಬ್ಯಾಂಕ್ ಮೇನೇಜರ್ ಉಮೇಶ್ ಕೋಟ್ಯಾನ್, ಮತ್ತಿತರರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಉದ್ಘಾಟನಾ ಅಂಗವಾಗಿ ಮಡಂತ್ಯಾರು ಗೋಪಾಲಕೃಷ್ಣ ತಂತ್ರಿಗಳಿಂದ ಬೆಳಿಗ್ಗೆ ವಾಸ್ತು ರಾಕ್ಷೆಘ್ನ ಹೋಮ, ಸುದರ್ಶನ ಹೋಮ, ವಾಸ್ತುಬಲಿ, ಗಣಹೋಮ, ಸತ್ಯನಾರಾಯಣ ಪೂಜೆ ವೈದಿಕ ವಿಧಾನಗಳೊಂದಿಗೆ ನಡೆಯಿತು ಹಾಗೂ ಬೆಂಗಳೂರಿನ ಶ್ರೀ ಲಕ್ಷ್ಮೀಪತಿ ಗೋಪಾಲಾಚಾರ್ಯ ರವರ ನೇತೃತ್ವದಲ್ಲಿ ಸೀತಾರಾಮ ಕಲ್ಯಾಣೋತ್ಸವ ಜರುಗಿತು.

ಈ ಸಂದರ್ಭದಲ್ಲಿ ಕಟ್ಟಡನಿರ್ಮಿಸಿದ ಇಂಜಿನಿಯರ್ ಸೂರ್ಯನಾರಾಯಣ ಉಜಿರೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ  ಮಹನೀಯರನ್ನು ಗೌರವಿಸಲಾಯಿತು.

ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಪಾಲುದಾರರಾದ ಶ್ರೀ ಗಣೇಶ್ ಪೈಂಟಿಂಗ್ಸ್ ಮತ್ತು ಪ್ಲೋರೀಗ್‌ನ ರವೀಂದ್ರ ಪೂಜಾರಿ, ಆರ್ಲ ಮತ್ತು ವೀಣಾ, ಮಾಲಕರಾದ ಸಂದೇಶ್ ಕುಮಾರ್ ಮತ್ತು ರಕ್ಷಿತಾ  ದಂಪತಿ ಮತ್ತು ಮನೆಯವರು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

ಶ್ರೀ ರಾಮಕ್ಷೇತ್ರದ ಟ್ರಸ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿ ವಂದಿಸಿದರು. ಮಂಗಳೂರು ಗೋಕರ್ಣನಾಥ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.