ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ ಹಾಗೂ ಚೈಲ್ಟ್ಫಂಡ್ ಇಂಡಿಯಾ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿನ ಆಯ್ದ 7 ಸರಕಾರಿ ಶಾಲೆಗಳಿಗೆ ಕಲಿಕೋಪಕರಣಗಳನ್ನು ವಿತರಣೆ ಕಾರ್ಯಕ್ರಮಜ.6 ರಂದು ವಿಮುಕ್ತಿ ಕಚೇರಿಯಲ್ಲಿ ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್ ಮಾತನಾಡಿ ವಿಮುಕ್ತಿ ಸಂಸ್ಧೆಯು ಬಾಲ್ಯದಿಂದಲೆ ಜನರ ಸೇವೆಯಲ್ಲಿ ಮತ್ತು ಜನರ ಬದುಕು ಕಟ್ಟುವಂತಹ ಕೆಲಸ ಮಾಡುತ್ತಿದೆ. ಮಕ್ಕಳನ್ನು ನೋಡಿಕೊಳ್ಳುವಂತಹ ರೀತಿ ಮತ್ತು ವಿಶೇಷತೆಯನ್ನು ಮತ್ತು ಮಕ್ಕಳ ಜೀವನಕ್ಕೆ ವಿಶ್ವಾಸವನ್ನು ನೀಡುವಂತ ಕೆಲಸವನ್ನು ಮಾಡುತ್ತಿದೆ ಎಂದರು .
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ, ವಿಮುಕ್ತಿ ಸಂಸ್ಧೆಯು ದಿವ್ಯಾಂಗ ಮಕ್ಕಳಿಗೆ ಶಾಲೆಯನ್ನು ಸ್ಧಾಪಿಸಿ, ಈ ಮಕ್ಕಳಿಗೆ ಶಿಕ್ಷಣದ ಜೊತೆ ಲಾಲನೆ ಪಾಲನೆ ಮಾಡುತ್ತಿರುವ ವಿಮುಕ್ತಿ ಸಂಸ್ಧೆ ಇದೀಗ ಸರಕಾರಿ ಶಾಲೆಗಳಿಗೆ ಕಲಿಕೋಪಕರಣಗಳನ್ನು ನೀಡಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ವಿಮುಕ್ತಿ ಸಂಸ್ಧೆಯ ನಿರ್ದೇಶಕ ವಂ.ಫಾ ವಿನೋದ್ ಮಸ್ಕರೇನ್ಹಸ್ ಮಾತನಾಡಿ, ಸಾಮಾನ್ಯ ಮಕ್ಕಳಿಗೆ ಈ ಕೋರೋನಾ ಸಂದರ್ಭದಲ್ಲಿ ಅನ್ಲೈನ್ ಶಿಕ್ಷಣವನ್ನು ನೀಡಲಾಗುತ್ತಿದ್ದು, ಅವಕಾಶ ವಂಚಿತರಾದ ಸರಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣ ಒದಗಿಸುವ ಮುಖಾಂತರ ವಿದ್ಯಾಗಮದಲ್ಲಿ ಸಹಭಾಗಿಯಾಗಿದ್ದರೆ, ಅದರ ಒಟ್ಟಿಗೆ ವಿಮುಕ್ತಿ ಸಂಸ್ಧೆಯು ವಿಶೇಷ ಮಕ್ಕಳಿಗೆ ಮಕ್ಕಳ ಮನೆಗೆ ಭೇಟಿ ನೀಡಿ ಸುರಕ್ಷತ ನಿಯಮಗಳನ್ನು ಪಾಲಿಸಿ ಫಿಸಿಯೋಥೆರಪಿ, ಆರೋಗ್ಯ ತಪಾಸಣೆ ಮಾಡುತ್ತಾ ಬಂದಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಅಗತ್ಯವಿರುವ 7 ಸರಕಾರಿ ಶಾಲೆಗಳನ್ನು ಆಯ್ಕೆಮಾಡಿ ಕಲಿಕೋಪಕರಣಗಳನ್ನು ವಿತರಿಸುತ್ತಿದ್ದೇವೆ. ಈ ಕಲಿಕೋಪಕರಣಗಳು ಬಡಮಕ್ಕಳಿಗೆ ಸಿಗುವಂತಾಗಲಿ, ಮಕ್ಕಳ ಶಿಕ್ಷಣ ಧಾರಾಳವಾಗಿ ಮುಂದುವರಿಯಲಿ ಎಂದು ಶುಭಹಾರೈಸಿದರು.
ಸಂಸ್ಧೆಯ ಸಹ ನಿರ್ದೇಶಕ ವಂಫಾ ರೋಹನ್ ಲೋಬೋ ಪ್ರಾಸ್ತವಿಕವಾಗಿ ಮಾತನಾಡಿ, ಈ ಕಲಿಕೋಪಕರಣಗಳು ಮಗುವಿನ ಶಿಕ್ಷಣಕ್ಕೆ ಉತ್ತೇಜನೆ ಹಾಗೂ ಉತ್ತಮ ಪ್ರಜೆಯಾಗಿ ಬರಲು ಸಹಾಯವಾಗಲಿ ಎಂದರು. ಶಿಕ್ಷಣ ಸಂಯೋಜಕ ಸುಭಾಶ್ ಜಾದವ್, 7 ಶಾಲೆಯ ಮುಖ್ಯ ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿ, ಪೋಷಕರು ಉಪಸ್ದಿತರಿದ್ದರು.
ಸಂಸ್ಧೆಯ ಶಿಕ್ಷಣ ಸಂಯೋಜಕಿ ಕು.ಎಮಿಲ್ಡಾ ಪಾಯಿಸ್ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಧನ್ಯವಾದವಿತ್ತರು.