ಅಳದಂಗಡಿ: ಕಳೆದ ಶನಿವಾರ ಇಲ್ಲಿನ ಕೆದ್ದು ತಿರುವು ರಸ್ತೆಯಲ್ಲಿ ನಡೆದ ಒಮ್ನಿ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಿಲ್ಯ ನಡಿಮಾರು ನಿವಾಸಿ, ಅಳದಂಗಡಿ ಗೋ ಆಸ್ಪತ್ರೆಯ ನಿವೃತ ಉದ್ಯೋಗಿ ಭುಜಬಲಿ ಅವರು ದಾರುಣವಾಗಿ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಶ್ರೀಧರ್ ಕೂಡ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಶ್ರೀಧರ್ ಅವರು ಕಳೆದ ಹಲವು ವರ್ಷಗಳಿಂದ ಅಳದಂಗಡಿಯಲ್ಲಿ ಅಟೋ ಓಡಿಸುತ್ತಿದ್ದು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು.