ಗುರುವಾಯನಕೆರೆ ರತ್ನಗಿರಿ ನಿವಾಸಿ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಹಿರಿಯ ಪ್ರಭಂದಕರು ಆಗಿದ್ದ ಕೊಳ್ಳಿ ಗಣೇಶ್ ಪ್ರಭು ಡಿ.30 ದಂದು ಸಾಯಂಕಾಲ 04:33ಕ್ಕೆ ಹೃದಯಾಘಾತದಿಂದ ಅಸು ನೀಗಿದರು.
ಮೃತರು ಗುರುವಾಯನಕೆರೆ, ಉಪ್ಪಿನಂಗಡಿ, ಕಕ್ಕಿಂಜೆ, ಮಂಗಳೂರು ಹೀಗೆ ಅನೇಕ ಕಡೆಗಳಲ್ಲಿ ಪ್ರಬಂಧರಾಗಿ ಕರ್ತವ್ಯ ನಿರ್ವಹಣೆ ಮಾಡಿರುತ್ತಾರೆ. ಗುರುವಾಯನಕೆರೆ
ಶ್ರೀ ವರದ ಪಾಂಡುರಂಗ ವಿಠಲ ಮಂದಿರದಲ್ಲಿ 8 ವರುಷ ಅಧ್ಯಕ್ಷರಾಗಿ, ಸಪ್ತಾಹದ ಯಶಸ್ಸಿಗೆ ಕಾರಣೀಭೂತರೂ ಮಂದಿರದ ಹಿರಿಯ ಸದಸ್ಯರು ಆಗಿದ್ದರು.
ಮಾಜಿ ರೋಟರಿ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಹಾಲಿ ಅಧ್ಯಕ್ಷರು, ಕುವೆಟ್ಟು ಗ್ರಾಮ ವಿಕಾಸ ಸಮಿತಿಯ ಸದಸ್ಯರು, ಶ್ರೀ ರಾಜ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರು, ವೇದವ್ಯಾಸ ಶಿಶು ಮಂದಿರದ ಕೋಶಾದಿಕಾರಿ, ಹಾಗೂ ಅನೇಕ ಸಂಘ ತೊಡಗಿಸಿಕೊಂಡು, ಕೊಡುಗೈ ದಾನಿಯೂ ಆಗಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಭಾಂಧವರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನಕ್ಕೆ ಬೆಳ್ತಂಗಡಿ ವಿಧಾನ ಪರಿಷತ್ ಸದಸ್ಯರಾಗಿರುವ ಪ್ರತಾಪ ಸಿಂಹ ನಾಯಕ್, ರೊಟೇರಿಯನ್ ಧನಂಜಯ ರಾವ್, ವೈಕುಂಠ ಪ್ರಭು, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ ನಾಯಕ್ ಗ್ರಾಮ ಪಂಚಾಯತ್ ಸದಸ್ಯರಾಗಿ ನೂತನವಾಗಿ ಆಯ್ಕೆ ಆದ ಮಂಜುನಾಥ್ ನಾಯಕ್ ಕುಂಬ್ಳೆ ಮಾಜಿ ಸದಸ್ಯರಾದ ವಿಶ್ವೇಶ್ ಕಿಣೆ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರು ಹಾಗೂ ಊರಿನ ಅನೇಕ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.