ಜ 8: ಕನ್ಯಾಡಿಯಲ್ಲಿ ಶ್ರೀ ಗಣೇಶ್ ರೆಸಿಡೆನ್ಸಿ ಉದ್ಘಾಟನೆ

ಧರ್ಮಸ್ಥಳ: ಇಲ್ಲಿಯ ಕನ್ಯಾಡಿ II ನಲ್ಲಿ ನೂತನ ಶ್ರೀ ಗಣೇಶ್ ರೆಸಿಡೆನ್ಸಿ ಜ.8 ರಂದು ಶುಭಾರಂಭಗೊಳ್ಳಲಿದೆ. ಶ್ರೀ ರಾಮ ಕ್ಷೇತ್ರದ ಮಠಾದೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು ಮಂಗಳೂರು ಸಮಸದರು ಹಾಗೂ ಭಾರತೀಯ ಜನತಾ ಪಕ್ಷ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರುಗಳಾದ ಕೆ. ಹರೀಶ್ ಕುಮಾರ್, ಕೆ ಪ್ರತಾಪ್‌ಸಿಂಹ ನಾಯಕ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕರುಗಳಾದ ಕೆ. ವಸಂತ ಬಂಗೇರ, ಕೆ. ಪ್ರಭಾಕರ ಬಂಗೇರ, ಮಂಕಾಳ್ ಎಸ್.ವೈದ್ಯಾ ಭಟ್ಕಳ, ಉಜಿರೆ ಭಾರತ್ ಬ್ಯಾಂಕ್ ಮೇನೇಜರ್ ಉಮೇಶ್ ಕೋಟ್ಯಾನ್, ಬಂಗಾಡಿ ಕೃ. ಪ. ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಅಂಗವಾಗಿ ಮಡಂತ್ಯಾರು ಗೋಪಾಲಕೃಷ್ಣ ತಂತ್ರಿಗಳಿಂದ ಬೆಳಿಗ್ಗೆ ವಾಸ್ತು ರಾಕ್ಷೆಘ್ನ ಹೋಮ, ಸುದರ್ಶನ ಹೋಮ, ವಾಸ್ತುಬಲಿ, ಗಣಹೋಮ, ಸತ್ಯನಾರಾಯಣ ಪೂಜೆ ವೈದಿಕ ವಿಧಾನಗಳೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಲಕ್ಷ್ಮೀಪತಿ ಗೋಪಾಲಾಚಾರ್‍ಯರಿಂದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಮತ್ತು ರಾತ್ರಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಎಂದು ಪಾಲುದಾರರಾದ ಶ್ರೀ ಗಣೇಶ್ ಪೈಂಟಿಂಗ್ಸ್ ಮತ್ತು ಪ್ಲೋರೀಗ್‌ನ ರವೀಂದ್ರ ಪೂಜಾರಿ, ಆರ್ಲ ಮತ್ತು ವೀಣಾ, ಮಾಲಕರಾದ ಸಂದೇಶ್ ಕುಮಾರ್ ಮತ್ತು ರಕ್ಷಿತಾ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.