ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ವಿ ಶೆಟ್ಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕು ಅಡಿಕೆ ವರ್ತಕರ ಸಂಘ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು ಇದರ ಸ್ಥಾಪಕ ಅಧ್ಯಕ್ಷರಾಗಿ ಬಾಲಕೃಷ್ಣ ವಿ ಶೆಟ್ಟಿ ಸವಣಾಲು, ಪ್ರಧಾನ ಕಾರ್ಯದರ್ಶಿಯಾಗಿ ಶಂಶುದ್ದೀನ್ ಜಾರಿಗೆಬೈಲು, ಕೋಶಾಧಿಕಾರಿಯಾಗಿ ಹೇಮಶಂಕರ ಶೆಟ್ಟಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜ.3ರಂದು ಗುರುವಾಯನಕೆರೆ ಬಂಟರಭವನದಲ್ಲಿ ನಡೆದ ತಾಲೂಕಿನ ಅಡಿಕೆ ವರ್ತಕರ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ತಾಲೂಕಿನಾದ್ಯಂತ ೭೦ಕ್ಕೂ ಅಧಿಕ ವರ್ತಕರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ಉಳಿದಂತೆ ಸಮಿತಿಯ ಉಪಾಧ್ಯಕ್ಷರಾಗಿ ಪ್ರಶಾಂತ್ ಶೆಟ್ಟಿ, ಪುರೋಷತ್ತಮ್, ಹಮೀದ್, ಜಮಾಲ್,ಕಾರ್ಯದರ್ಶಿಯಾಗಿ ಜಗದೀಶ್ ಮತ್ತು ಸತೀಶ್ ರೈ, ಮಾಧ್ಯಮ ಮತ್ತು ಪ್ರಚಾರ ಪ್ರಮುಖರಾಗಿ ಸುದೀಪ್ ಶೆಟ್ಟಿ, ಗೌರವ ಸಲಹೆಗಾರರಾಗಿ ಪದ್ಮರಾಜ್ ಜೈನ್, ಬಿ ಹೈದರ್ ಮತ್ತು ಪುಷ್ಪರಾಜ್ ಜೈನ್ ನೇಮಕಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.