ಶ್ರೀ ಗೋಪಾಲಕೃಷ್ಣ ದೇವರ ನೂತನ ವಿಗ್ರಹ ಹಾಗೂ ಹೊರೆಕಾಣಿಕೆಯೊಂದಿಗೆ ಕೊಲ್ಲಿಯಿಂದ ಕಜಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭವ್ಯ ಮೆರವಣಿಗೆ
ಮಲವಂತಿಗೆ: ಇಲ್ಲಿಯ ಕಜಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀ ಸತ್ಯನಾರಾಯಣ ಭಟ್ ಬಜಗೋಳಿ ಇವರ ನೇತೃತ್ವದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಹಾಗೂ ಸಪರಿವಾರ ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.5 ರಿಂದ ಜ.8ರವರೆಗೆ ನಡೆಯಲಿದೆ.
ಆ ಪ್ರಯುಕ್ತ ಇಂದು(ಜ.5) ಶ್ರೀ ಗೋಪಾಲಕೃಷ್ಣ ದೇವರ ನೂತನ ವಿಗ್ರಹ ಹಾಗೂ ಹೊರೆಕಾಣಿಕೆಯೊಂದಿಗೆ ಕೊಲ್ಲಿಯಿಂದ ಕಜಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭವ್ಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಕಜಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ತಂತ್ರಿಗಳು, ಪುರೋಹಿತ ವರ್ಗ, ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಗೂ ಊರ-ಪರಊರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.