ಕುತ್ಲೂರು: ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಪದಾಧಿಕಾರಿಗಳ ರಚನೆಯು ಜ 4 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ SDMC ಅಧ್ಯಕ್ಷರಾದ ಪ್ರಭಾಕರ ದೇವಾಡಿಗ, ಮುಖ್ಯೋಪಾಧ್ಯಾಯರಾದ ಸುಮನಾಜಿ, ಸಮಾಜ ಸೇವಕರಾದ ರಾಮಚಂದ್ರ ಭಟ್ ನಾರಾವಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪ್ರಮೀಳಾ.ಆರ್.ಭಟ್, ಸದಸ್ಯರುಗಳಾದ ಸುದರ್ಶನ್ ಹೆಗ್ಡೆ, ಸಂತೋಷ್ ಷಮರ್ದೋಟ್ಟು, ಆಶಾಲತಾ, ಮೀನಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಶಾಲಾ SDMC ಅಧ್ಯಕ್ಷರಾಗಿ “ಕೆ.ರಾಮಚಂದ್ರ ಭಟ್” , ಉಪಾಧ್ಯಕ್ಷರಾಗಿ “ಜ್ಯೋತಿ ಶೆಟ್ಟಿ” ಹಾಗೂ SDMC ಸದಸ್ಯರಾಗಿ ಸಂತೋಷ್ ಮರ್ದೋಟ್ಟು, ಹರೀಶ್ ಪೂಜಾರಿ, ಭಾರತಿ, ಸುಮಲತಾ, ಆನಂದ ಕುಲಾಲ್, ಸುನಂದ, ವಸಂತ್ ಪೂಜಾರಿ, ಆಶಾಲತಾ, ಜಯ ಮಲೆಕುಡಿಯ, ಪ್ರೇಮ, ರೇವತಿ, ಲಲಿತ, ಮಹಾಬಲ, ಮೀನಾ, ಶ್ವೇತಾ ಜಗದೀಶ್, ಸುಭಿಕ್ಷಾ, 18 ಜನ ಆಯ್ಕೆ ಗೊಂಡರು.
ಶಿಕ್ಷಕ ಪ್ರಶಾಂತ್ ನಿರೂಪಿಸಿ, ವಿದ್ಯಾಗಮ 2 ಮತ್ತು ಶಾಲಾ ಶೈಕ್ಷಣಿಕ ಮಾಹಿತಿಯ ಬಗ್ಗೆ ಶಾಲಾ ಶಿಕ್ಷಕಿ ರೂಪ ಕುಮಾರಿ ಇವರು ಮಾಹಿತಿ ನೀಡಿದರು. . ಶಿಕ್ಷಕಿ ಶಿಲ್ಪ ಧನ್ಯವಾದಗೈದರು.