ಬೆಳ್ತಂಗಡಿ ಪೊಲೀಸರಿಗೆ ತಾಲೂಕು ಪತ್ರಕರ್ತರ ಸಂಘದಿಂದ ಅಭಿನಂದನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಉಜಿರೆ: ಉಜಿರೆಯ ಬಾಲಕ “ಅನುಭವ್” ಅಪಹರಣ ಪ್ರಕರಣವನ್ನು ಭೇದಿಸುವಲ್ಲಿ ಪತ್ರಕರ್ತರ ಸಹಕಾರ ಅವಸ್ಮರಣೀಯ. ನಮ್ಮ ತನಿಖೆಗೆ ತೊಂದರೆಯಾಗದಂತೆ ಬೆಳ್ತಂಗಡಿ ಪತ್ರಕರ್ತರು ಮಾಹಿತಿ ಕಲೆಹಾಕಿ ನಮಗೆ ನೆರವಾಗಿದ್ದಾರೆ. ಅವರಿಗೆ ನಾವು ಚಿರಋಣಿಗಳಾಗಿದ್ದೇವೆ ಎಂದು ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ .ಜಿ .ನುಡಿದರು.

ಅವರು ಬೆಳ್ತಂಗಡಿ ತಾಲೂಕು . ಪತ್ರಕರ್ತರ ಸಂಘದ ವತಿಯಿಂದ ಜ .2 ರಂದು ಪತ್ರಿಕಾ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಗೌರವಾರ್ಪಣೆ ಸ್ವೀಕರಿಸಿ ಮಾತನಾಡುತ್ತಿದ್ದರು.

ಎಸ್.ಪಿ. ಅವರ ನೇತೃತ್ವದಲ್ಲಿ 6 ತಂಡಗಳನ್ನು ರಚಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು. ಉಜಿರೆಯ ಸಾರ್ವಜನಿಕರು ತಕ್ಷಣ ಸ್ಪಂದಿಸಿ ಮಾಹಿತಿ ನೀಡಿದ್ದರಿಂದ ಮಗುವನ್ನು ಪತ್ತೆ ಹಚ್ಚಲು ಅನುಕೂಲವಾಯಿತು. ಒಂದು ದಿನ ತಡವಾಗುತ್ತಿದ್ದರೂ ಮಗು ಗಡಿ ದಾಟುತ್ತಿತ್ತು . ಜಿಲ್ಲಾ ಎಸ.ಪಿ ಲಕ್ಷ್ಮೀ ಪ್ರಸಾದ್ ಅವರು ತಂಡದ ಪ್ರತಿಯೊಬ್ಬರಿಗೂ ಸೂಕ್ತ ಮಾರ್ಗದರ್ಶನ ನೀಡಿ ಕಾರ್ಯಾಚರಣೆ ಚುರುಕುಗೊಳ್ಳಲು ಕಾರಣವಾಯಿತು.

ಬೆಳ್ತಂಗಡಿ ಎಸ..ಐ ನಂದಕುಮಾರ್ ,ಧರ್ಮಸ್ಥಳ ಎಸ್ .ಐ . ಪವನ್ ನಾಯ್ಕ್, ಸಂಚಾರಿ ಠಾಣಾ ಎಸ್ .ಐ ಕುಮಾರ್ ಕಾಂಬ್ಳೆ ಹಾಗೂ ಪೊಲೀಸ್ ಅಧಿಕಾರಿಗಳ ಪರಿಶ್ರಮದಿಂದ ಪ್ರಕರಣವನ್ನು ಭೇದಿಸಿ ಆರೋಪಿಗಳ ಬಂಧನಕ್ಕೆ ಸಾಧ್ಯವಾಯಿತು. ಮಗುವಿನ ಪತ್ತೆ ಹಾಗು ತನಿಖೆಗೆ ನೆರವಾದ ಎಲ್ಲ ಪತ್ರಕರ್ತ ಮಿತ್ರರಿಗೆ ಧನ್ಯವಾದಗಳು. ಮುಂದೆಯೂ ತಮ್ಮ ಪೂರ್ಣ ಸಹಕಾರ ವಿರಲಿ ಎಂದರು.

ಸಂಘದ ಅಧ್ಯಕ್ಷ ಅಶ್ರಫ್ ಅಲಿಕುಂಞ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಜಿರೆಯ ಅಪಹರಣ ಪ್ರಕರಣ ಇಡೀ ರಾಷ್ಟ್ರದ ಗಮನ ಸೆಳೆದಿದ್ದು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರ ಸಾಧನೆಗೆ ಪತ್ರಕರ್ತರ ಸಂಘದ ವತಿಯಿಂದ ಹಾರ್ದಿಕ ಅಭಿನಂದನೆಗಳು ಎಂದು ಶುಭಾಶಂಸನೆಗೈದರು.

ಬೆಳ್ತಂಗಡಿ ಎಸ್ .ಐ. ನಂದಕುಮಾರ್ ,ಧರ್ಮಸ್ಥಳ ಎಸ್ .ಐ .ಪವನ್ ನಾಯ್ಕ್ ,ಸಂಚಾರಿ ಠಾಣೆಯ ಎಸ್ .ಐ . ಕುಮಾರ್ ಕಾಂಬ್ಳೆ ಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು .

ಪತ್ರಕರ್ತ ಚೈತ್ರೇಶ್ ಇಳಂತಿಲ ಸ್ವಾಗತಿಸಿ ಪ್ರಸ್ತಾವಿಸಿ , ಮನೋಹರ್ ಬಳಂಜ ನಿರೂಪಿಸಿ ,ಭುವನೇಶ್ ಗೇರುಕಟ್ಟೆ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.