ಉಜಿರೆ : ಇಲ್ಲಿಯ ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಸಮುದಾಯದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ ಜ.3ರಂದು ಉಜಿರೆ ಸಂತ ಅಂಥೋಣಿ ಚರ್ಚ್ನಲ್ಲಿ ಜರಗಿತು.
ಉಜಿರೆ ಗ್ರಾ.ಪಂ.ಸದಸ್ಯರುಗಳಾದ ಪ್ರೇಮ್ ವೇಗಸ್, ಜಾನೆಟ್ ಪಿಂಟೊ, ಅನಿಲ್ ಡಿಸೋಜಾ, ಬೆಳಾಲು ಗ್ರಾ.ಪಂ.ಸದಸ್ಯ ಪ್ರವೀಣ್ ಡಿಸೋಜಾ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಧರ್ಮಗುರುಗಳಾದ ವಂ. ಫಾ. ಜೇಮ್ಸ್ ಡಿಸೋಜಾ, ವಂ. ಫಾ. ಉದಯ್ ಜೋಸೆಫ್, ವಂ.ಫಾ. ವಿಲಿಯಂ ಪಿಂಟೊ, ಸಿ.ಡೋರಾ, ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ನಿತಿನ್ ಮೋನಿಸ್, ಸಂಚಾಲಕ ವಿಲಿಯಂ ಡಿಸೋಜಾ ಉಪಸ್ಥಿತರಿದ್ದರು.